Wednesday 11 July 2018

ಅವರಿಗೂ ಜೀವನವಿದೆ , ಅವರನ್ನು ನಿಮ್ಮಂತೆ ನೋಡಿಕೊಳ್ಳಿ...

ಹೌದು ನಾವಿಂದು ಬದುಕುತ್ತಿರುವುದು ಯಾಂತ್ರೀಕೃತ ಬದುಕಿನಲ್ಲಿ, ಈ ಸಂದರ್ಭದಲ್ಲಿ ನಮಗೆ ನಮ್ಮವರ ಬಗ್ಗೆ ಕೇರ್ ತಗೋಳೋದಕ್ಕೆ ಟೈಮ್ ಇರಲ್ಲ.. ಇನ್ನು ಬೇರೆಯವರ ಬಗ್ಗೆ ನಾವೆಲ್ಲಿ ಕೇರ್ ತಗೋತೇವೆ ಹೇಳಿ?.... ಅದೇ ರೀತಿಯ ಒಂದು ಕಥೆ ಹೇಳ್ತಾ ನನ್ನ ಈ ಲೇಖನ ಪ್ರಾರಂಭ ಮಾಡ್ತೀನಿ ಕೇಳಿ.. ಹೇಳಿ ಕೇಳಿ ಇದು ಅವರಿವರ ಕಥೆಯಲ್ಲ ನನ್ನ ಸ್ವಂತ ಜೀವನದ ಕಥೆಯೇ...


 ನಾನು ನನ್ನ ಜಿವನದಲ್ಲಿ ಬಹುಪಾಲು ಎಲ್ಲೋ ಕಳೆದು ಹೋಗಿರುತ್ತಿದ್ದೆ, ನನ್ನ ವೈಯಕ್ತಿಕ ಅನ್ವೇಷಣೆಯಲ್ಲೋ ಅಥವಾ ಯಾವುದಾದರೊಂದು ಕಥೆಯ ಕುರಿತ ವಿಮರ್ಶೆಯಲ್ಲೋ ಇದ್ಯಾವುದೂ ಅಲ್ಲದಿದ್ದರೆ ಯಾವುದಾದರೂ ರಾಜಕೀಯ ವಿಚಾರಗಳನ್ನು ತಲೆಗೆ ಹಚ್ಚಿಕೋಂಡು ಸುಮ್ಮನೆ ಅಲೆಮಾರಿಯಂತೆ ಅಲೆಯುತ್ತಿದ್ದೆ, ಆದರೆ ನಾನು ಓದುತ್ತಿದ್ದುದ್ದು ಸುಮಾರು 1500 ಮಂದಿ ವಿದ್ಯಾರ್ಥಿಗಳಿದ್ದ ಒಂದು ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ.. ಹೇಳಿ ಕೇಳಿ ಓದಿನಲ್ಲಿ ಅಷ್ಟು ಆಸಕ್ತಿ ನಾನು ತೋರಿಸಿಲ್ಲವಾದರೂ ಬೇರೆ ಕೆಲವು ವಿಚಾರಗಳಲ್ಲಿ ನಾನು ಅತ್ತಿಂದಿತ್ತ ಓಡಾಡುತ್ತಲೇ ಇದ್ದೆ.. ಇವೆಲ್ಲಾ ಯಾಕೆ ಅಂತೀರಾ? ಸ್ನೇಹಿತರೇ ವಿಚಾರ ಇರೋದೇ ಇಲ್ಲಿ... ನಾನು ಓದುತ್ತಿದ್ದ ಆ ವಿದ್ಯಾಸಂಸ್ಥೆಯಲ್ಲಿ ಸುಮರು 15ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಯೂರಿಟಿ ಹಾಗೂ ನಮ್ಮ ಕಾಲೇಜಿನ ಆವರಣದ ಶುಚಿತ್ವ ಕಾಪಾಡುವ ದೇವರಂತಹಾ ಆಯಾಗಳಿದ್ದರು.. ಅವರೆಲ್ಲರೂ ವಯಸ್ಸಿನಲ್ಲಿ ನನ್ನ ಗುರುಗಳಷ್ಟೇ ಹಿರಿಯರು... ಹೇಳೀ ಕೇಳಿ ಸುಮಾರು 1500 ವಿದ್ಯಾರ್ಥಿಗಳಿದ್ದ ಕಾಲೇಜು ಅಂದರೆ ಕೇಳಬೇಕೇ? ಅಲ್ಲಲ್ಲಿ ವಿದ್ಯಾರ್ಥಿಗಳ ಗುಂಪು ,ಅವರವರ ಹರಟೆಗಳಲ್ಲಿ ತೊಡಗಿಕೊಂಡಿರುತ್ತವೆ, ಅಲ್ಲಿಗೆ ಏನಾದರೂ ಆಯಾಗಳು ಅಥವಾ ನಮ್ಮ ಕಾಲೇಜಿನ ಸೆಕ್ಯೂರಿಟಿಗಳು ಬಂದು ಮಾತನಾಡಿಸಲು ಹೊರಟರೆ, ನಗುತ್ತಾ ಮಾತನಾಡುವ ಬದಲು ಅಲ್ಲಿಂದ ಜಾಗ ಖಾಲಿ ಮಾಡುವವರೇ ಹೆಚ್ಚು, ಆದರೆ ನನಗೆ ಯಾಕೋ ಗೊತ್ತಿಲ್ಲ ಈ ಸೆಕ್ಯೂರಿಟಿ ಹಾಗೂ ಆಯಾಗಳ ಮೇಲೆ ತುಂಬಾ ಕ್ಯೂರಿಯಾಸಿಟಿ ಹಾಗೂ ಗೌರವ, ನಾನು ಪ್ರತಿದಿನ ಕಾಲೇಜಿನ ಆವರನದೊಳಕ್ಕೆ ಎಂಟ್ರಿಯಾಗುವಾಗ ಸೆಕ್ಯೂರಿಟಿಗೂ ಹಾಗೂ ನನಗೆ ಎದುರಾಗುವ ಆಯಾಗಳಿಗೂ ಪ್ರತಿನಿತ್ಯ ನಮಸ್ಕರಿಸುತ್ತಲಿದ್ದೆ , ಸಾಧ್ಯವಾದರೆ ಒಂದೆರಡು ನಿಮಿಷ ಮಾತನಾಡುತ್ತಲಿದ್ದೆ, ಹೀಗೆ ದಿನಕಳೆದಂತೆ ನನಗೆ ಏನೇ ಕಷ್ಟ ಬಂದರು ಅವರ ಬಳಿ ಹೇಳಿಕೊಳ್ಳುವಷ್ಟು ಸಲುಗೆ ನನಗೆ ಬೆಳೆದಿತ್ತು, ಹೇಗಿರುವಾಗ ಕೆಲವೊಂದು ಬಾರಿ ನಾನು ಅವರ ಬಳಿ ಮಾತನಾಡಲು ಮರೆತಾಗ ಅವರೇ ಬಂದು ಮಾತನಾಡಿಸಿ ,"ಏನು ಮಗ ಇವತ್ತು ನನ್ನ ಬಳಿ ಮಾತನಾಡಿಯೇ ಇಲ್ಲವಲ್ಲ ,ಏಕೆ ಎಂದು ಕೇಳುವವರಿದ್ದರು, ಅಷ್ಟರ ಮಟ್ಟಿಗೆ ನಮ್ಮ ಬಾಂಧವ್ಯದ ಬೆಸುಗೆ ಬೆಳೆದಿತ್ತು, ಜೊತೆಗೆ ನಾನು ಕಷ್ಟದಲ್ಲಿದ್ದಾಗ ಅವರೇ ಎಷ್ಟೋಂದು ಬಾರಿ ಸಹಾಯವೂ ಮಾಡಿದ್ದರು, ಈ ಎಲ್ಲಾ ವಿಚಾರ ಈಗ ಯಾಕೆ ಅಂತೀರಾ? ವಿಚರ ಇರುವುದೇ ಇಲ್ಲಿ... ನಮ್ಮಲ್ಲಿ ಹಲವರು ಇಂದು ಅನೇಕ ಅನೇಕ ಕಂಪೆನಿಗಳಲ್ಲಿ ಏನೋ ದೊಡ್ಡ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬಹುದು ,ಆದರೆ ಅಲ್ಲೇ ನಮ್ಮ ಕಣ್ಮುಂದೆ ಇರುವ ಸೆಕ್ಯೂರಿಟಿ ಅಥವಾ ಆಯಾಗಳನ್ನು ಸರಿಯಾಗಿ ಮಾತನಾಡಿಸುತ್ತೇವೆಯೇ? ಖಂಡಿತಾ ಇಲ್ಲ...  ನೀವು ಮಾತನಾಡಿಸುತ್ತಿಲ್ಲವದಲ್ಲಿ ನಾಳೆಯಿಂದ ಒಂದು ಪ್ರಯತ್ನ ಮಾಡಿ ನಿಮ್ಮ ಕಂಪೆನಿಯ ಸೆಕ್ಯುರಿಟಿ ಅಥವಾ ಆಯಾಗಳೀಗೆ , ಜಸ್ಟ್ ಒಂದು ಮಾತು ಮಾತನಾಡಿ , ಅದೂ ಆಗದು ಎಂದಾದರೆ ಜಸ್ಟ್ ಒಂದು ಗುಡ್ ಮಾರ್ನಿಂಗ್ ಆದರೂ ಹೇಳಿ , ಆಗ ಅವರ ಮುಖ ಯಾವ ರಿತಿಯಲ್ಲಿ ಅರಳುವುದು , ನಿಮ್ಮ ಮೇಲೆ ಯವ ರಿತಿಯ ಬದಲಾವಣೆಗಳಾಗುವುದು, ಒಮ್ಮೆ ನೋಡಿ, ಅವರ ಹಾರೈಕೆಗಳು ಯಾವ ರಿತಿಯಲ್ಲಿ ಬದಲಾಗುತ್ತವೆ ನೀವೇ ನೋಡಿ.... ನನ್ನ ಲೇಖನದ ಸಾರ ಇಷ್ಟೇ ನಿಮ್ಮ ಬಳಿ ಕೆಲಸ ಮಾಡುವ ಪ್ರತಿಯೋಬ್ಬರಿಗೂ ಅವರದ್ದೇ ಆದ ಜೀವನಗಳಿರುತ್ತವೆ , ಅವರವರ ಸ್ವಗೌರವಗಳಿರುತ್ತವೆ, ಅವರಿಗೂ ಗೌರವ ನೀಡಿ ನಿಮ್ಮ ಮನಸ್ಸಿಗೂ ಅವರ ಮನಸ್ಸಿಗೂ ಆಗುವ ಆನಂದವನ್ನು ಆಸ್ವಾದಿಸಿ

ಇಂತಿ ಪ್ರೀತಿಯಿಂದ
ಅಕ್ಷಯ್

No comments:

Post a Comment