Wednesday 18 July 2018

ಶ್ರೀ ರಾಮಕೃಷ್ನರ ವಚನವೇದ : ದೇವರ ಇರುವಿಕೆಯ ಕುರಿತಾದ ಪ್ರಶ್ನೆ

ನಿನ್ನೆಯ ಸಂಚಿಕೆಯಿಂದ : ಮಾಸ್ಟರರ ಪ್ರಶ್ನೆಗೆ ಶ್ರೀ ರಾಮಕೃಷ್ಣರು ಉತ್ತರಿಸುತ್ತಾ, ಸಾಕಾರರೂಪಿ ದೇವರು ಎಷ್ಟು ಸತ್ಯವೋ ನಿರಾಕಾರರೂಪಿ ದೇವರು ಸಹಾ ಅಷ್ಟೇ ಸತ್ಯ ಎಂದು ಉತ್ತರಿಸಿದ್ದಾರೆ , ಇಷ್ಟಕ್ಕೆ ಮಾಸ್ಟರರ ಸಂದೇಹ ಕಡಿಮೆಯಾಗಿಲ್ಲ ಇನ್ನೇನಿದೆ , ನೋಡೋಣ
ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಮಾತನ್ನು ಮಾಸ್ಟರ್ ಮಹಾಶಯರು ಯೋಚಿಸಹತ್ತಿದರು, ಹೌದು ಶ್ರೀ ರಾಮಕ್ರಷ್ಣ ಪರಮಹಂಸರು ಹೇಲಿದ ಮಾತು ನಿಜವಾಗಿಯೂ ಸತ್ಯ. ಮಾಸ್ಟರ್ ಮಹಾಶಯರ ಅಂಹಂಭಾವ ಈಗ ಒಂದು ತಹಬದಿಗೆ ಬಂದಿತ್ತು ಆದರೆ ಸಂಪೂರ್ಣವಾಗಿ ನಶಿಸಿರಲಿಲ್ಲ. ಆದ್ದರಿಂದ ಶ್ರೀ ರಾಮಕೃಷ್ಣರೊಡನೆ ವಾದಕ್ಕಿಳಿದ
ಮಾಸ್ಟರ್ ; ಗುರುಗಳೇ, ಒಬ್ಬ ಸಾಕಾರರೂಪಿ ದೇವರನ್ನು ನಂಬುತ್ತಾನೆ ಎಂದಾದರೆ, ಆತ ವಿಗ್ರಹವನ್ನು ನಂಬುತ್ತಿದ್ದಾನೆ, ಹಾಗಾದರೆ ಅಲ್ಲಿರುವುದು ಕೇವಲ ವಿಗ್ರಹವಲ್ಲ ಬದಲಾಗಿ ಯಾವುದೋ ಶಕ್ತಿಯೇ ?
ಶ್ರೀ ರಾಮಕೃಷ್ಣರು : ಹೌದು ಆ ಮೂರ್ತಿಯನ್ನು ವಿಗಹ್ರ ಮಾತ್ರ ಎಂದು ಏಕೆ ಅಂದುಕೊಳ್ಳುತ್ತಿಯೇ? ಅದು ಶಕ್ತಿಯ ದ್ಯೋತಕವಾಗಿರಬಹುದು
ಮಾಸ್ಟರ್ : (ಶ್ರೀ ರಾಮಕೃಷ್ಣರ ವಾಕ್ಯಗಳನ್ನು ಅರಗಿಸಿಕೊಳ್ಳಲಾಗದೆ) ಗುರುಗಳೇ, ಮೂರ್ತಿ ಪೂಜೆಯನ್ನು ಮಾಡುವವವನು ಅದರ ಮಹತ್ವವನ್ನು ಇತರರಿಗೆ ತಿಳಿಸಬೇಕು ಮತ್ತು ಮೂರ್ತಿ ಪೂಜೆ ಮಾಡುವಾಗ ಆತನಿಗೆ ಒಂದು ವಿಚಾರ ಮನದಲ್ಲಿ ಇರಬೇಕು ಆತ ದೇವರನ್ನು ಮೂರ್ತಿ ರೂಪದಲ್ಲಿ ಪೂಜಿಸುತ್ತಿದ್ದಾನೆ ಎಂದು ಬದಲಾಗಿ ಆತ ಕೇವಲ ಡಾಂಭಿಕ ಪೂಜೆಯನ್ನು ಮಾಡಬಾರದು. ಆತ ದೇವರನ್ನೇ ಪೂಜಿಸಬೇಕೆಂದು ನಂಬಿರಬೇಕಲ್ಲವೆ?

ಶ್ರೀ ರಾಮಕೃಷ್ಣ ಪರಮಹಂಸ : (ಸ್ವಲ್ಪ ಕೋಪದಿಂದ) ಹೌದು ಪ್ರವಚನ ನೀಡುವುದು ಕಲ್ಕತ್ತೆಯ ಜನತೆಯ ಹವ್ಯಾಸವಾಗಿ ಬಿಟ್ಟಿದೆ , ಆದರೆ ತಾನೆಷ್ಟು ಜ್ಞಾನಿ ಎಂದು ಯಾರೂ ಯೋಚಿಸಲಾರರು. ಅಲ್ಲ ನಾನು ಕೇಳುವುದು ಇಷ್ಟೇ ಇತರರಿಗೆ ಬುದ್ದಿಮಾತು ಹೇಳಲು ನಿನಗೇನು ಅರ್ಹತೆ ಇದೆ ಹೇಳು ? ಈ ಭೂಮಂಡಲಕ್ಕೆ ಸರ್ವಾಧಿಪತಿ ಯಾರೋ, ಯಾರು ಸೂರ್ಯ ಚಂದ್ರರ ಹುಟ್ಟಿಗೆ ಕಾರಣನೋ ಆತನೇ ಎಲ್ಲರಿಗೂ ಬುದ್ದಿ ಕಲಿಸುವನು. ಅಲ್ಲ ಆ ಭಗವಂತ ಮಾನವರಿಗಾಗಿ ಇಷ್ಟೊಂದು ಮಾಡಿರುವಾಗ, ಆತನನ್ನು ಭಜಿಸಲು ಆತ ದಾರಿ ತೋರದಿರುವನೇ ? ಈ ಮಾನವರಿಗೆ ಭಗವಂತನ ಧ್ಯಾನ ಬೇಕೆಂದಾದರೆ ಅಂತವರಿಗಾಗಿ ಭಗವಂತ ಗುರುವಾಗಲೂ ಸಿದ್ಧ… ಅಲ್ಲ ಮೂರ್ತಿ ಪೂಜೆ ಮಾಡುವಾಗ ಏನಾದರೂ ಲೋಪ ಉಂಟಾದರೆ, ಆ ಮೂರ್ತಿಯಲ್ಲಿರುವ ಭಗವಂತನಿಗೆ ತಿಳಿಯದಿದ್ದೀತೇ? ನೀನೇ ಹೇಳು ?ಅದಕ್ಕಾಗಿ ನೀನೇಕೆ ತಲೆ ಕೆಡಿಸಿಕೊಂಡಿದ್ದೀಯೇ?


ಈ ಬಾರಿ ಮಾಸ್ಟರ್ ಮಹಾಶಯರ ಅಹಂಭಾವ ಸಂಪೂರ್ಣವಾಗಿ ಇಳಿದಿತ್ತು. ಮಾಸ್ಟರ್ ಮಹಾಶಯರು ಅಂದುಕೊಳ್ಳುತ್ತಿದ್ದಾರೆ, “ ಹೌದು ಒಂದರ್ಥದಲ್ಲಿ ಗುರುಗಳು ಸತ್ಯವನ್ನೇ ನುಡಿದಿದ್ದಾರೆ,ಇನ್ನೊಬ್ಬರಿಗೆ ನಾನು ಕಲಿಸುವ ಅರ್ಹತೆಯದರೂ ನನಗೆ ಏನಿದೆ? ಅಲ್ಲ ನಾನು ದೇವರನ್ನು ಸಾಕ್ಷಾತ್ಕಾರ ಪಡಿಸಿಕೊಂಡಿದ್ದೇನೆಯೇ? ನನಗೇ ಉಳಿದುಕೊಳ್ಳಲು ಸರಿಯಾದ ಜಾಗವಿಲ್ಲ, ಅಂತಹುದರಲ್ಲಿ ನಾನು ನನ್ನ ಸಹವರ್ತಿಗಳನ್ನು ಉಳಿದುಕೊಳ್ಳಲು ಕರೆಯುತ್ತೆನಲ್ಲ... ಏನಿದು ನನ್ನ ಮೇಲೆ ನನಗೆ ಅವಮಾನವಾಗಬೇಕು. ನನ್ನ ಮೂಖತನಕ್ಕೆ ನನ್ನನ್ನು ನಾನೇ ಹಳಿದುಕೊಳ್ಳಬೇಕು. ಆದ್ಯಾತ್ಮ ಎನ್ನುವುದು ಗಣಿತವಲ್ಲ ಅಥವಾ ಇನ್ಯಾವುದೂ ವಿಚಾರವಲ್ಲ.. ಆದ್ಯಾತ್ಮ ಎನ್ನುವುದು ಒಂದು ನಿಗೂಢವಾದಂತಹಾ ವಿಚಾರ, ಗುರುಗಳು ಹೇಳುವುದರಲ್ಲಿ ಒಂದು ಅರ್ಥವಿದೆ” ಎಂದುಕೊಂಡರು. ಶ್ರೀ ರಾಮಕೃಷ್ಣರ ಬಳಿ ಮಾಸ್ಟರ್ ಮಹಾಶಯರ ಪ್ರಥಮ ಹಾಗೂ ಕೊನೇಯ ವಾದ ಇದೇ ಆಗಿತ್ತು

ಶ್ರೀ ರಾಮಕೃಷ್ಣರು : ನೀನು ಮೂರ್ತಿಪೂಜೆಯ ಬಗ್ಗೆ ಮಾತನಾಡುತ್ತಿದ್ದೆಯಲ್ಲ, ಕೇಳು , ಮೂರ್ತಿಯನ್ನು ಮಣ್ಣಿನಿಂದ ಮಾಡಿದ್ದರೂ ಅಂತಹಾ ವಿಚಾರಗಳು ಖಂಡಿತಾ ಬೇಕು ಏಕೆಂದರೆ ಅನೇಕ ಬಾರಿ ದೇವನೇ ಅನೇಕ ಅವತಾರಗಳಿಂದ ಆತನ ಇರುವಿನ ಬಗ್ಗೆ ಖಾತ್ರಿಪಡಿಸಿದ್ದಾನಲ್ಲವೇ? ಅದೆ ಸರ್ವಶಕ್ತನಾದ ದೇವನು ಅನೇಕ ರೂಪಗಳಿಂದ ಬೇರೆ ಬೇರೆ ರೀತಿಯಲ್ಲಿ ಜ್ಞಾನವನ್ನು ನೀಡುವ ಪ್ರಯತ್ನ ಮಾಡಿದ್ದಾನೆ.
ಈಗ ನೋಡು ತಾಯಿಯೊಬ್ಬಳು ಮಕ್ಕಳ ರುಚಿಗೆ ತಕ್ಕಂತೆ ಅಡುಗೆ ಮಾಡುವುದಿಲ್ಲವೇ? ಈಗ ಉದಾಹರಣೆಗೆ ಒಬ್ಬ ತಾಯಿಗೆ 5 ಮಕ್ಕಳಿದ್ದಾರೆ ಎಂದು ತಿಳಿದುಕೋ ಆಕೆ ತನ್ನ ಮಕ್ಕಲ ಇಷ್ಟದಂತೆ ಬಗೆ ಬಗೆಯ ಆಹಾರವನ್ನು ಮಾಡಿ ಬಡಿಸುವುದಿಲ್ಲವೇನು? ಅದೇ ರೀತಿ ಆದ್ಯಾತ್ಮವೂ ಕೂಡಾ. . . ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?
 ಮಾಸ್ಟರ್ ಮಹಾಶಯರು : (ನಮ್ರತೆಯಿಂದ) ಗುರುಗಳೇ , ದೇವರಲ್ಲಿ ನಮ್ಮ ಮನಸ್ಸುಗಳನ್ನು ಕೇಂದ್ರೀಕರಿಸುವುದು ಹೇಗೆ ?

ಶ್ರೀ ರಾಮಕೃಷ್ಣರು : ದೇವರ ನಾಮಗಳನ್ನು ಜಪಿಸುತ್ತಿರು, ಆತನ ಕೀರ್ತನೆಗಳನ್ನು ಹಾಡಿ ಹೊಗಳು , ಸಜ್ಜನರ ಸಂಗ ಮಾಡು. ಯಾವಾಗಲೂ ಆತನ ಕುರಿತಾಗಿಯೇ ಯೋಚಿಸುತ್ತಿರು. ಆದರೆ ದೇವರಲ್ಲಿ ನಿಮ್ಮ ಮನಸ್ಸನ್ನು ನೆಡುವುದು ಅಷ್ಟು ಸುಲಭದ ಮಾತಲ್ಲ, ಪ್ರಾರಂಭದಲ್ಲಿ ಧ್ಯಾನ ಮತ್ತು ಸತತ ಪ್ರಯತ್ನದಿಂದ ಮಾತ್ರ ಸಾಧ್ಯ. ಒಂದು ಗಿಡ ಮರವಾಗಿ ಬೆಳೆಯಬೇಕಾದರೆ ಹೇಗೆ ಗಿಡಕ್ಕೆ ಬೇಲಿ ಹಾಕಬೇಕೋ ನಿಮ್ಮ ಮನಸ್ಸೆಂಬ ಮರಕ್ಕೆ ಪ್ರಾರಂಭದಲ್ಲಿ ಬೇಲಿಯನ್ನು ಹಾಕಬೇಕು. ಇಲ್ಲವಾದರೆ ಯಾರಾದರೂ ಬಂದು ನಿಮ್ಮ ಮನಸ್ಸನ್ನು ಕೆಡಿಸಿ ಬಿಟ್ಟಾರು.
ಧ್ಯಾನ ಮಾಡಲು ನೀವು ಅನೇಕ ರೀತಿಯ ಆಚರಣೆಗಳನ್ನು ಮಾಡಬೇಕಾಗುತ್ತದೆ, ಬಹಳ ಮುಖ್ಯವಾಗಿ ಸಾಕಾರರೂಪಿ ದೇವನಲ್ಲಿ ನಂಬಿಕೆ ಇಡಬೇಕು. ದೇವನೊಬ್ಬನೇ ಸತ್ಯ ಬೇರೆಯೆಲ್ಲವು ಮಿಥ್ಯ.

ಮಾಸ್ಟರ್ ಮಹಾಶಯ ; (ನಮ್ರತೆಯಿಂದ) ಹಾಗದರೆ ನಾವು ಯಾವ ರೀತಿಯಾಗಿ ಪ್ರಾಪಂಚಿಕ ಬದುಕಿನಿಂದ ದೂರವಿರಬೇಕು ?
ಶ್ರೀ ರಾಮಕೃಷ್ಣರು : ನಿನ್ನೆಲ್ಲಾ ಕರ್ತವ್ಯಗಳನ್ನು ನೀನು ಮಾಡು ಜೊತೆಯಲ್ಲಿ ದೇವರ ಮೆಲೆ ನಂಬಿಕೆಯಿಡು, ನಿನ್ನ ಕುಟುಂಬದ ಜೊತೆಯಲ್ಲೇ ಜೀವಿಸು ಅವರನ್ನು ಪ್ರೀತಿಸು, ಅವರ ಸೇವೆ ಮಾಡು ಆದರೆ ಹೃದಯದಲ್ಲಿ ದೇವರ ಮೆಲೆ ನಂಬಿಕೆಯಿಡು ಅಷ್ಟೇ. . . . ಈಗ ನೋಡು ಶ್ರೀಮಂತರ ಮನೆಯಲ್ಲಿ ಸೇವಕಿಯು ಸೇವೆಯನ್ನೆನೋ ಮಾಡುತ್ತಿರುತ್ತಾಳೆ ಆದರೆ ನೋಡು ಆಕೆಯ ಮನಸ್ಸು ಸದಾ ತನ್ನ ಮನೆಯಲ್ಲೇ ನೆಟ್ಟಿರುತ್ತಾಳೆ. ಮಾಲಿಕನ ಮಗುವನ್ನು ರಾಮ,ಕೃಷ್ಣ ಹರಿ ಎಂದೆಲ್ಲಾ ಕರೆಯುತ್ತಾಳೆ ಆದರೆ ಆಕೆಯ ಮನಸ್ಸು ಸದಾ ತನ್ನ ಮಕ್ಕಳ ಬಳಿ ಸುಳಿಯುತ್ತಿರುತ್ತಲ್ಲವೇ? ಆಮೆಯು ನೀರಿನಲ್ಲಿ ಈಜುತ್ತಿದ್ದರೂ ಅದರ ಮನಸ್ಸು ಮಾತ್ರ ನದಿ ಕಿನಾರೆಯಲ್ಲಿರುವ ಅದರ ಮೊಟ್ಟೆಗಳ ಮೇಲಿರುತ್ತದಲ್ಲವೇ? ಹಾಗೇಯೇ ನೀನು ಕೂಡಾ ನಿನ್ನ ಕರ್ತವ್ಯಗಳನ್ನು ಮಾಡು ಆದರೆ ಮನಸ್ಸನ್ನು ಮಾತ್ರ ದೇವರ ಮೇಲಿಡು ಅಷ್ಟೇ...

ಇಂದಿನ ಕಥಾಮಾಲಿಕೆಗೆ ಇಲ್ಲೇ ಮುಕ್ತಾಯವನ್ನಿಟ್ಟು ನಿಮ್ಮ ಮನಸ್ಸುಗಳನ್ನು ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಐಕ್ಯವಾಗಿರಿಸಿ, ನಿಮ್ಮೆಲ್ಲಾ ಕಾರ್ಯಗಳನ್ನು ಶ್ರೀ ರಾಮಕೃಷ್ಣ ಪರಮಹಂಸರ ಪಾದಗಳಿಗೆ ಅರ್ಪಿಸಿ



English Translation


M., rather surprised, said to himself: "How can one believe in God without form when one believes in God with form? And if one believes in God without form, how can one believe that God has a form? Can these two contradictory ideas be true at the same time? Can a white liquid like milk be black?"

M: "Sir, I like to think of God as formless."

MASTER: "Very good. It is enough to have faith in either aspect. You believe in God without form; that is quite all right. But never for a moment think that this alone is true and all else false. Remember that God with form is just as true as God without form. But hold fast to your own conviction."

The assertion that both are equally true amazed M.; he had never learnt this from his books. Thus his ego received a third blow; but since it was not yet completely crushed, he came forward to argue with the Master a little more.

M: "Sir, suppose one believes in God with form. Certainly He is not the clay image!"

MASTER (interrupting): "But why clay? It is an image of Spirit."

M. could not quite understand the significance of this "image of Spirit". "But, sir," he said to the Master, "one should explain to those who worship the clay image that it is not God, and that, while worshipping it, they should have God in view and not the clay image. One should not worship clay."

MASTER (sharply): "That's the one hobby of you Calcutta people — giving lectures and bringing others to the light! Nobody ever stops to consider how to get the light himself. Who are you to teach others?

"He who is the Lord of the Universe will teach everyone. He alone teaches us, who has created this universe; who has made the sun and moon", men and beasts, and all other beings; who has provided means for their sustenance; who has given children parents and endowed them with love to bring them up. The Lord has done so many things — will He not show people the way to worship Him? If they need teaching, then He will be the Teacher. He is our Inner Guide.

"Suppose there is an error in worshipping the clay image; doesn't God know that through it He alone is being invoked? He will be pleased with that very worship. Why should you get a headache over it? You had better try for knowledge and devotion yourself."

This time M. felt that his ego was completely crushed. He now said to himself: "Yes, he has spoken the truth. What need is there for me to teach others? Have I known God? Do I really love Him? 'I haven't room enough for myself in my bed, and I am inviting my friend to share it with me!' I know nothing about God, yet I am trying to teach others. What a shame! How foolish I am! This is not mathematics or history or literature, that one can teach it to others. No, this is the deep mystery of God; What he says appeals to me.

This was M.'s first argument with the Master, and happily his last. MASTER: "You were talking of worshipping the clay image. Even if the image is made of clay, there is need for that sort of worship. God Himself has provided different forms of worship. He who is the Lord of the Universe has arranged all these forms to suit different men in different stages of knowledge.

"The mother cooks different dishes to suit the stomachs of her different children. Suppose she has five children. If there is a fish to cook, she prepares various dishes from it — pilau, pickled fish, fried fish, and so on — to suit their different tastes and powers of digestion.

"Do you understand me?"

M. (humbly'): "Yes, sir. How, sir, may we fix our minds on God?"

MASTER: "Repeat God's name and sing His glories, and keep holy company; and now and then visit God's devotees and holy men. The mind cannot dwell on God if it is immersed day and night in worldliness, in worldly duties and responsibilities; it is most necessary to go into solitude now and then and think of God. To fix the mind on God is very difficult, in the beginning, unless one practises meditation in solitude. When a tree is young it should be fenced all around; otherwise it may be destroyed by cattle.

"To meditate, you should withdraw within yourself or retire to a secluded corner or to the forest. And you should always discriminate between the Real and the unreal. God alone is real, the Eternal Substance; all else is unreal, that is, impermanent. By discriminating thus, one should shake off impermanent objects from the mind."

M. (humbly): "How ought we to live in the world?"

MASTER: "Do all your duties, but keep your mind on God. Live with all — with wife and children, father and mother — and serve them. Treat them as if they were very dear to you, but know in your heart of hearts that they do not belong to you.

A maidservant in the house of a rich man performs all the household duties, but her thoughts are fixed on her own home in her native village. She brings up her master's children as if they were her own. She even speaks of them as 'my Rama' or 'my Hari'. But in her own mind she knows very well that they do not belong to her at all.

The tortoise moves about in the water. But can you guess where her thoughts are? There on the bank, where her eggs are lying. Do all your duties in the world, but keep your mind on God.

Tuesday 17 July 2018

ಶ್ರೀ ರಾಮಕೃಷ್ಣ ವಚನವೇದ : ಮಾಸ್ಟರ್ ಮತ್ತು ಶ್ರೀ ರಾಮಕೃಷ್ಣರ ಸಂಭಾಷಣೆ

ನಿನ್ನೆಯ ಸಂಚಿಕೆ : ಶ್ರಿ ರಾಮಕೃಷ್ಣರ ಪರಿಚಯವಾಗಿ ಅಲ್ಲಿ ಸ್ವಲ್ಪ ಕಾಲ ಕಳೆದ ಮಾಸ್ಟರ್ ಮಹಾಶಯರು ಮತ್ತು ಅವರ ಗೆಳೆಯ ಶ್ರೀ ರಾಮಕೃಷ್ಣ ಪರಮಹಂಸರ ಕೊಠಡಿಯಿಂದ ಹೊರಬಂದರು. . ಮುಂದೆ ???? ಇಂದಿನ ಸಂಚಿಕೆಯಲ್ಲಿ ಓದಿ

ಮಾಸ್ಟರ್ ಮಹಾಶಯರು ರಾಮಕೃಷ್ಣರ ಬಳಿಯಿಂದ ಹೊರಟು ಮನೆಗೆ ಹಿಂದಿರುಗುತ್ತಿದ್ದಾಗ ಆಲೋಚಿಸುತ್ತಿದ್ದಾರೆ.. ಯಾರು ಈ ಪುಣ್ಯಾತ್ಮ ? ಇವರೇಕೆ ನನ್ನ ಮನಸ್ಸಿನ್ನಲಿ ಇಷ್ಟು ಅಚ್ಚೊತ್ತಿದ್ದಾರೆ ?.. ಏನೂ ಪುಸ್ತಕಗಳನ್ನು ಓದದೇ ಅಂತಹಾ ಅದ್ಬುತ ಜ್ಞಾನಿಯಾಗಲು ಹೇಗೆ ಸಾಧ್ಯ? ಖಂಡಿತ ಈ ಪುಣ್ಯಾತ್ಮನೊಬ್ಬ ಮಹತ್ಮನೇ ಸರಿ ಮತ್ತೆ ನಾನು ನಾಳೆ ಇವರನ್ನು ಭೇಟಿಯಾಗಲು ಬರುವೆ ಎಂದು ಮನಸ್ಸಿನಲ್ಲೇ ಅಂದುಕೊಂಡರು…

ಮಾರನೆಯ ದಿನ ಮಾಸ್ಟರ್ ಮಹಾಶಯ, ಠಾಕೂರರನ್ನು ಭೇಟಿಯಾಗಲು ಆಗಮಿಸಿದರು, ಶ್ರೀ ರಮಕ್ರಷ್ಣರು ತಮ್ಮ ಕೊಠಡಿಯ ಆಗ್ನೇಯ ದಿಕ್ಕಿನಲ್ಲಿ ಕುಳಿತಿದ್ದರು. ಸಮಯ ಬೆಳಗ್ಗೆ ಸುಮಾರು ಎಂಟು ಗಂಟೆ. ಮಸ್ಟರ್ ಮಹಾಶಯರು ಚೆನ್ನಾಗಿ ಕ್ಷೌರವನ್ನೆಲ್ಲಾ ಮಾಡಿಸಿಕೊಂಡು ಶ್ರೀ ರಾಮಕೃಷ್ಣರ ದರ್ಶನಕ್ಕಾಗಿ ಆಗಮಿಸಿದರು. ಮಸ್ಟರ್ ಮಹಾಶಯರನ್ನು ಕಾಣುತ್ತಲೇ ಶ್ರೀ ರಾಮಕೃಷ್ಣರು ಆನಂದದಿಂದ “ ಹಾ. .  ಬಂದೆಯಾ? ಬಾ.. ಕುಳಿತುಕೋ”. .
ಶ್ರೀ ರಾಮಕೃಷ್ಣರು : (ಮಾಸ್ಟರರನ್ನು ಉದ್ದೇಶಿಸಿ) ಯಾವ ಊರಪ್ಪಾ ?
ಮಾಸ್ಟರ್ : ಕಲ್ಕತ್ತಾ  ಗುರುಗಳೇ...
ಶ್ರೀ ರಾಮಕೃಷ್ಣರು : ಇಲ್ಲಿ ಯಾರ ಮನೆಯಲ್ಲಿರುವೆ ?
ಮಾಸ್ಟರ್; ಬಾರಾನಗರದಲ್ಲಿ ನನ್ನ ಸಹೋದರಿಯೊಬ್ಬಳ ಮನೆಯಲ್ಲಿ , ಅದೇ ಈಶಾನ್ ಕವಿರಾಜ್ ಅವರ ಮನೆಯಲ್ಲಿ …

ಶ್ರೀ ರಾಮಕೃಷ್ಣರು :ಓಹೋ. .  ಈಶಾನ್ ನ್ ಮನೆಯಲ್ಲಿಯೇ ? ಸರಿ ಸರಿ ಕೇಶವ ಹೇಗಿದ್ದಾನೆ? ಬಹಳ ಅನಾರೋಗ್ಯದಿಂದ ಬಳಲುತ್ತಿದ್ದ,
ಮಾಸ್ಟರ್ : ಹೌದು ಈ ಬಗ್ಗೆ ನಾನು ಕೇಳಿದ್ದೆ,  ಆದರೆ ಈಗ ಸ್ವಲ್ಪ ಹುಷಾರಗಿದ್ದಾರೆ.
ಶ್ರೀ ರಾಮಕೃಷ್ಣರು : ಓಹೋ.. ಹೌದೇ  ಕೇಶವನ ಆರೋಗ್ಯಕ್ಕಾಗಿ ನಾನು ಹಲವಾರು ಬಾರಿ ಮಾತೆ ಕಾಳಿಯ ಬಳಿ ಬೇಡಿಕೊಂಡಿದ್ದೆ , ಅದೆಷ್ಟೋ ಬಾರಿ ನಾನು ಬೆಳಗ್ಗೆ ಬೇಗನೆ ಎದ್ದು ಕಾಳಿ ಮಾತೆಯ ಬಳಿ ಕೇಶವನ ಆರೋಗ್ಯ ಸರಿಹೋಗಲೆಂದು ಅತ್ತಿದ್ದೇನೆ , ಈ ಕಲ್ಕತ್ತದಲ್ಲಿ ಕೇಶವನೇ ಇಲ್ಲದಿದ್ದರೆ ನಾನು ಯಾರ ಬಳಿ ಮಾತನಾಡಲಿ ?ಅದಕ್ಕಾಗಿ ನಾನು ಎಳನೀರಿನ ಅಭಿಷೇಕದ ಹರಕೆ ಹೊತ್ತದ್ದು .
ಇರಲಿ ಬಿಡು .. ನಿನಗೆ ಶ್ರೀ ಕುಕ್ ನ ಬಗ್ಗೆ ಏನಾದರೂ ತಿಳಿದಿದೆಯೇನು ? ಆತ ಒಂದು ಬಾರಿ ಕಲ್ಕತ್ತಾಗೆ ಬಂದಿದ್ದ, ಆತನೇನೋ ಪ್ರವಚನ ನೀಡುತ್ತಾನಂತಲ್ಲ ? ಒಂದು ಬಾರಿ ಕೇಶವ ನನ್ನನ್ನು ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದ ಅಲ್ಲಿಗೆ ಶ್ರೀ ಕುಕ್ ಕೂಡಾ ಬಂದಿದ್ದರು ..
ಮಾಸ್ಟರ್ : ಹ್ಞಾಂ ಹೌದು ನಾನು ಕೂಡಾ ಆತನ ಬಗ್ಗೆ ಕೇಳಿದ್ದೇನೆ ಆದರೆ ಯಾವತ್ತೂ ಆತನ ಪ್ರವಚನ ಕೇಳಲು ನಾನು ಹೋಗಿಲ್ಲ ..ಆದ್ರಿಂದ ನನಗೆ ಆತನ ಬಗ್ಗೆ ಗೊತ್ತಿಲ್ಲ
ಶ್ರೀ ರಾಮಕೃಷ್ಣರು : ಒಮ್ಮೆ ಪ್ರತಾಪನ ತಮ್ಮ ಇಲ್ಲಿಗೆ ಬಂದಿದ್ದ, ಇಲ್ಲಿ ಕೆಲ ಕಾಲ ತಂಗಿದ್ದ, ಆತನಿಗೆ ಇಲ್ಲೇನು ಕೆಲಸವಿರಲಿಲ್ಲ ಆದರೆ ಇಲ್ಲಿ ಬಂದು ವಸತಿ ಹೂಡಿದ್ದ , ಕೆಲವು ಸಮಯಗಳ ಬಳಿಕ ನನಗೆ ಆತನ ಬಗ್ಗೆ ತಿಳಿದು ಬಂತು, ಆತ ತನ್ನ ಹೆಂಡತಿ ಮಕ್ಕಳನ್ನು ಆತನ ಮಾವನ ಬಳಿ ಬಿಟ್ಟು ಬಂದಿದ್ದ, ನಾನು ಚೆನ್ನಾಗಿ ಬೈದು ಆತನಿಗೆ ಬುದ್ದಿ ಹೇಳಿ ಒಂದು ಕೆಲಸ ಹುಡುಕುವಂತೆ ಹೇಳಿದ್ದೆ, ಬಳಿಕ ಆತ ಇಲ್ಲಿಂದ ತೆರಳಿದ್ದ.

ಶ್ರೀ ರಾಮಕೃಷ್ಣರು : ಹೌದು ನಿನಗೆ ಮದುವೆಯಾಗಿದೆಯೇನು ?
ಮಾಸ್ಟರ್ : ಹೌದು
ಶ್ರೀ ರಾಮಕೃಷ್ಣರು : ರಾಮಲಾಲನನ್ನು ಕರೆದು : ಬೇಸರದಿಂದ , ಅಯ್ಯೋ ಈತನಿಗೆ ಮದುವೆಯಾಗಿದೆ
(ಏನೋ ಅನ್ಯಥಾಭಾವದಿಂದ ಮಾಸ್ಟರ್ ತಲೆತಗ್ಗಿಸಿ ಕುಳಿತುಕೊಂಡು ಯೋಚಿಸುತ್ತಿದ್ದಾರೆ , ಮದುವೆಯಾಗುವುದರಲ್ಲಿ ಬೇಸರ ಮಡುವಂತದ್ದು ಏನಿದೆ ?
ಶ್ರೀ ರಾಮಕೃಷ್ಣರು : ಮತ್ತೆ ಮುಂದುವರೆದು , ನಿನಗೆ ಮಕ್ಕಳಿದ್ದಾರೆಯೆ ?
ಮಾಸ್ಟರ್ : ಭಯಮಿಶ್ರಿತ ಮೆಲುದನಿಯಲ್ಲಿ “ಹೌದು ನನಗೆ ಮಕ್ಕಳಿದ್ದಾರೆ”
ಶ್ರೀ ರಾಮಕೃಷ್ಣರು : ಬೇಸರದಿಂದ  ಅಯ್ಯೋ ಇವನಿಗೆ ಮಕ್ಕಳೂ ಇದ್ದಾರೆ ..
ಈಗ ಮಾಸ್ಟರ್ ಮಾತನಾಡದೇ ಕುಳಿತಿದ್ದಾರೆ ಶ್ರೀ ರಾಮಕೃಷ್ಣರು ಮುಂದುವರೆದು :” ನೀನು ನೋಡಲು ಬಹಳ ಸಾಧುವಿನಂತೆ ಕಾಣುತ್ತಿದ್ದೀಯೇ.. ನಿನ್ನ ಕಂಗಳಲ್ಲಿ ದೈವಿಕ ಭಾವನೆ ಕಾಣುತ್ತಿದೆ, ಈಗ ಹೇಳು ನಿನ್ನ ಮಡದಿಗೆ ಆಧ್ಯಾತ್ಮದಲ್ಲಿ ಆಸಕ್ತಿಯಿದೆಯೇ ಅಥವಾ ಆಕೆ ಅವಿದ್ಯಾವಂತಳೇ?”
ಮಾಸ್ಟರ್ : ಆಕೆ ಉತ್ತಮಳೇ ಆದರೆ ಆಕೆ ಸ್ವಲ್ಪನಿರಕ್ಷರಕುಕ್ಷಿ
ಶ್ರೀ ರಾಮಕೃಷ್ಣರು : (ಸ್ವಲ್ಪ  ಅಸಮಾಧಾನದಿಂದ) ಹಾಗಾದರೆ ನೀನೇನು ಜ್ಞಾನಿಯೇ?
ಮಾಸ್ಟರ್ ಮಹಾಶಯ ಜ್ಞಾನ ಅಜ್ಞಾನದ ನಡುವಿನ ಅಂತರವನ್ನು ಯೋಚಿಸುತ್ತಿದ್ದ, ಆತನ ಪ್ರಕಾರ  ಜ್ಞಾನವೆಂದರೆ ಶಾಲೆ ಕಾಲೇಜುಗಳಲ್ಲಿ ಓದಿದ ವಿದ್ಯೆ ಎಂದು ಭಾವಿಸಿದ್ದ.ದೇವರೆಂದರೆ ಜ್ಞಾನವೆಂದು ಆತ ಅರಿತಿದ್ದಶ್ರೀ ರಾಮಕೃಷ್ಣರು : ನೀನು ಜ್ಞಾನಿಯೇ…!!! ಆದರೆ ನಿನಗೆ ದೇವರ ಮೇಲೆ ನಂಬಿಕೆ ಇದೆಯೇ ?
ಮಾಸ್ಟರ್ : ಆಶ್ಚರ್ಯದಿಂದ, ಅವನಷ್ಟಕ್ಕೇ ಯಾವುದೇ ರೂಪವಿಲ್ಲದ ದೇವರನ್ನು ನಂಬುವುದು ಹೇಗೆ? ಕೆಲವರು ದೇವರನ್ನು ರುಪದಿಂದ ನಂಬುತ್ತಾರೆ , ಇನ್ನು ಕೆಲವರು ರೂಪವಿಲ್ಲದ ದೇವರನ್ನು ನಂಬುತ್ತಾರೆ  ಇವೆರಡರ ನಡುವೆ ನಾವು ಹೇಗೆ ದೇವರ ಮೇಲೆ ನಂಬಿಕೆ  ಇಡುವುದು ?
ಮಾಸ್ಟರ್ : ನನಗೆ ದೇವರ ಮೇಲೆ ನಂಬಿಕೆಯಿದೆ ಆದರೆ ನಾನು ನಿರಾಕಾರ ದೇವರನ್ನು ನಂಬುತ್ತೇನೆ
ಶ್ರೀ ರಾಮಕೃಷ್ಣರು : ಒಳ್ಳೆಯದು ದೇವರ ಮೇಲೆ ನಂಬಿಕೆಯಿರಬೇಕು. ನೀನು ನಿರಾಕಾರ ದೇವರನ್ನು ನಂಬುತ್ತಿಯೇ, ಆದರೆ ಅದನ್ನೇ ಸತ್ಯವೆಂದು ನಂಬಬಾರದು, ಒಂದು ಮಾತು ನೆನಪಿರಲಿ ನಿರಾಕಾರ ದೇವರು ಎಷ್ಟು ಸತ್ಯವೊ ಸಾಕಾರ ದೇವರು ಕೂಡಾ ಅಷ್ಟೇ ಸತ್ಯ..

ಮುಂದಿನ ಮಾತುಕತೆ ನಾಳಿನ ಸಂಚಿಕೆಯಲ್ಲಿ



English Translation


On his way home M. began to wonder: "Who is this serene-looking man who is drawing me back to him? Is it possible for a man to be great without being a scholar? How wonderful it is! I should like to see him again. He himself said, 'Come again.' I shall go tomorrow or the day after."


M.'s second visit to Sri Ramakrishna took place on the southeast verandah at eight o'clock in the morning. The Master was about to be shaved, the barber having just arrived. As the cold season still lingered he had put on a moleskin shawl bordered with red. Seeing M., the Master said: "So you have come. That's good. Sit down here." He was smiling. He stammered a little when he spoke.

SRI RAMAKRISHNA (to M.): "Where do you live?"

M: "In Calcutta, sir."

SRI RAMAKRISHNA: "Where are you staying here?"

M: "I am at Baranagore at my older sister's — Ishan Kaviraj's house."

SRI RAMAKRISHNA: "Oh, at Ishan's? Well, how is Keshab now? He was very ill."

M: "Indeed, I have heard so too, but I believe he is well now."

SRI RAMAKRISHNA: "I made a vow to worship the Mother with green coconut and sugar on Keshab's recovery. Sometimes, in the early hours of the morning, I would wake up and cry before Her: 'Mother, please make Keshab well again. If Keshab doesn't live, whom shall I talk with when I go to Calcutta?' And so it was that I resolved to offer Her the green coconut and sugar.

"Tell me, do you know of a certain Mr. Cook who has come to Calcutta? Is it true that he is giving lectures? Once Keshab took me on a steamer, and this Mr. Cook, too, was in the party."

M: "Yes, sir, I have heard something like that; but I have never been to his lectures. I don't know much about him."

SRI RAMAKRISHNA: "Pratap's brother came here. He stayed a few days. He had nothing to do and said he wanted to live here. I came to know that he had left his wife and children with his father-in-law. He has a whole brood of them! So I took him to task. Just fancy! He is the father of so many children! Will people from the neighbourhood feed them and bring them up? He isn't even ashamed that someone else is feeding his wife and children, and that they have been left at his father-in-law's house. I scolded him very hard and asked him to look for a job. Then he was willing to leave here.

"Are you married?"

M: "Yes, sir."

SRI RAMAKRISHNA (with a shudder): "Oh, Ramlal!' (A nephew of Sri Ramakrishna, and a priest in the Kali temple.) Alas, he is married!"

Like one guilty of a terrible offence, M. sat motionless; his eyes fixed on the ground. He thought, "Is it such a wicked thing to get married?"

The Master continued, "Have you any children?"

M. this time could hear the beating of his own-heart. He whispered in a trembling voice, "Yes, sir, I have children."

Very sadly Sri Ramakrishna said, "Ah me! He even has children!"

Thus rebuked M. sat speechless. His pride had received a blow. After a few minutes Sri Ramakrishna looked at him kindly and said affectionately; "You see, you have certain good signs. I know them by looking at a person's forehead, his eyes, and so on. Tell me, now, what kind of person is your wife? Has she spiritual attributes, or is she under the power of avidya?"

M: "She is all right. But I am afraid she is ignorant."

MASTER (with evident displeasure): "And you are a man of knowledge!"

M. had yet to learn the distinction between knowledge and ignorance. Up to this time his conception had been that one got knowledge from books and schools. Later on he gave up this false conception. He was taught that to know God is knowledge, and not to know Him, ignorance. When Sri Ramakrishna exclaimed, "And you are a man of knowledge!", M.'s ego was again badly shocked.

MASTER: "Well, do you believe in God with form or without form?"

M., rather surprised, said to himself: "How can one believe in God without form when one believes in God with form? And if one believes in God without form, how can one believe that God has a form? Can these two contradictory ideas be true at the same time? Can a white liquid like milk be black?"

M: "Sir, I like to think of God as formless."

MASTER: "Very good. It is enough to have faith in either aspect. You believe in God without form; that is quite all right. But never for a moment think that this alone is true and all else false. Remember that God with form is just as true as God without form. But hold fast to your own conviction."

Monday 16 July 2018

ಶ್ರೀ ರಾಮಕೃಷ್ಣರ ವಚನವೇದದ ಸಾರ… ಅದ್ಯಾಯ 01

ಅಂದು ಭಾನುವಾರ 1882 ಮಾರ್ಚ್, ಶ್ರೀ ರಾಮಕ್ರಷ್ಣ ಪರಮಹಂಸರ ಹುಟ್ಟುಹಬ್ಬ ಕಳೆದು ಸ್ವಲ್ಪ ದಿನಗಳಾಗಿತ್ತಷ್ಟೇ.. ಶ್ರೀ ರಾಮಕೃಷ್ಣರು ಎಂದಿನಂತೆ ಕಾಳಿ ದೇವಾಲಯದ ಬಳಿ ಕುಳಿತಿದ್ದರು,  ಅದು ಮೊದಲ ಬಾರಿ ಶ್ರೀ ರಾಮಕೃಷ್ಣರನ್ನು ಮಾಸ್ಟರ್ ಮಹಾಶಯರು ಮೊದಲ ಬಾರಿಗೆ ಭೇಟಿಯಾಗಿದ್ದರು, ಹೀಗೆ ಮಾಸ್ಟರ್ ಮಹಾಶಯರು ಮತ್ತು ಅವರ ಸ್ನೇಹಿತರು ಹೀಗೆ ವಾಯುವಿಹಾರಕ್ಕಾಗಿ ಹೋಗುತ್ತಿದ್ದಂತಹಾ ಸಂದರ್ಭದಲ್ಲಿ ,ಮಾಸ್ಟರ್ ಮಹಾಶಯರ ಗೆಳೆಯ ಸಿದ್ದು ಬಾರನಗರದ ಕಡೆ ನಡೆದುಕೊಂಡು ಬರುತ್ತಿರಲು, ಸಿದ್ದು ಮಸ್ಟರ್ ಮಹಾಶಯರ ಬಳಿ ಹೀಗೆಂದು ಕೇಳುತ್ತಾನೆ “ ಇಲ್ಲೆ ಗಂಗಾ ನದಿಯ ತೀರದಲ್ಲಿ ಒಂದ ಅತ್ಯದ್ಭುತ ಕ್ಷೇತ್ರವಿದೆ ಅಲ್ಲಿ ಶ್ರೀ ರಾಮಕೃಷ್ಣ ಎಂಬ ಮಹಾನುಭಾವ ಇದ್ದಾರೆ ಎಂದು ಕೇಳಿದ್ದೇನೆ ಹೋಗಿ ಬರೋಣವೇ ? ಎಂದು ಕೇಳಿದಾಗ ಮಾಸ್ಟರ್ ಮಹಾಶಯರು ಕೂಡಲೆ ಸಮ್ಮತಿಸಿ, ದಕ್ಷಿಣೇಶ್ವರದತ್ತ ಪಯಣ ಬೆಳೆಸುತ್ತಾರೆ, ದಕ್ಷಿಣೇಶ್ವರದ ಕಾಳಿ ದೇವಾಲಯದ ಬಳಿ ಬರಲು ಶ್ರೀ ರಾಮಕೃಷ್ಣರು ಕೆಲ ಭಕ್ತಾದಿಗಳೊಂದಿಗೆ ತಮ್ಮ ಕೊಠಡಿಯಲ್ಲಿ ಒಂದು ಮಣೆಯ ಮೇಲೆ ಪೂರ್ವಕ್ಕೆ ಮುಖಮಾಡಿ ಕುಳಿತುಕೊಂಡಿದ್ದರು, ಕೋಣೆಯಲ್ಲಿ ಸಂಪೂರ್ಣ ನಿಶ್ಯಬ್ಧ ನೆಲೆಸಿತ್ತು.
ಮಾಸ್ಟರ್ ಮಹಾಶಯರೂ ಕೂಡಾ ಸತ್ಸಂಗದಲ್ಲಿ ಕುಳಿತುಕೊಂಡು ಪರಮಹಂಸರ ಮಾತುಗಳನ್ನು ಕೇಳಲು ಅಣಿಯಾದರು, ಪರಮಹಂಸರನ್ನು ನೋಡುತ್ತಿದ್ದಂತೆ,ಮಾಸ್ಟರ್ ಮಹಾಶಯರಿಗೆ , ಸಾಕ್ಷಾತ್ ಶುಕದೇವನೇ ದೇವರ ವಾಕ್ಯಗಳನ್ನು ಹೇಳುತ್ತಿರುವಂತೆ ಅಥವಾ ಶ್ರೀ ಚೈತನ್ಯ ಮಹಾಪ್ರಭು ಪುರಿ ಜಗನ್ನಾಥನ ಧಯಾನದಲ್ಲಿ ತೊಡಗಿರುವಂತೆಯೇ ಭಾಸವಾಗಿತ್ತಂತೆ,.

ಶ್ರೀ ರಾಮಕೃಷ್ಣರು ಸತ್ಸಂಗದಲ್ಲಿ ಮಾತಾನಾಡುತ್ತಾ ಹೇಳುತ್ತಿದ್ದಾರೆ, ಶ್ರೀ ಹರಿಯ ನಾಮ ಅಥವಾ ಶ್ರೀರಾಮನ ಹೆಸರನ್ನು ಕೇಳಿದೊಡನೆಯೇ ನಿಮ್ಮ ಕಣ್ಣುಗಳಲ್ಲಿ ಅಶ್ರುಧಾರೆ ಸುರಿಯಬೇಕು, ನಿಮ್ಮ ಮನಸ್ಸಿನಲ್ಲಿ ದೈವಾಧೀನ ಭಾವನೆ ಹೊಮ್ಮಬೇಕು ಎದನ್ನೆ ನೈಜ ಭಕ್ತಿ ಎನ್ನುವುದು, ಈ ರೀತಿಯ ಭಾವನೆಗಳು ನಿಮಗಾದರೆ ನೀವು ನೈಜ ಪೂಜೆ ಮಾಡಿದಂತೆ, ಢಾಂಭಿಕ ಪೂಜೆ ಮಾಡುವ ಬದಲು ಈ ರೀತಿಯ ಪೂಜೆಯ ಮೂಲಕ ದೇವರನ್ನು ಒಲಿಸಿಕೊಳ್ಳಿ ಎಂದು ಹೇಳುತ್ತಿದ್ದರು.
ಸತ್ಸಂಗ ಮುಕ್ತಾಯವಾದ ಬಳಿಕ ಮಾಸ್ಟರ್ ಮಹಾಶಯರು ಸುತ್ತಲೂ ನೋಡುತ್ತಾ , ಆಹಾ ಎಂತಹಾ ಅದ್ಭುತವಾದ ಕ್ಷೇತ್ರವಿದು !!  ಎಂತಹಾ ಓಜಸ್ವಿ ಪುರುಷ.. ಎಂತಹಾ ಅದ್ಭುತವಾದ ಮಾತುಗಳು ಇಲ್ಲಿ ಕುಳಿತರೆ ಎದ್ದು ಹೋಗಲು ಮನಸೇ ಆಗುತ್ತಿಲ್ಲ.. ಮೊದಲು ಈ ಎಲ್ಲಾ ಕ್ಷೇತ್ರವನ್ನು ದರ್ಶಿಸಿಕೊಂಡು ಬರುವೆ ಎಂದು ಹೊರಟರು…ಗೆಳೆಯ ಸಿದ್ದುವಿನೊಂದಿಗೆ ಕೊಠಡಿಯಿಂದ ಹೊರಬಂದ ಮಾಸ್ಟರ್ ಮಹಾಶಯರು, ಹೊರಬರುತ್ತಲೇ ಪಕ್ಕದ ನಹಬತ್‍ಖಾನೆಯಿಂದ ಸುಶ್ರಾವ್ಯ ಸಂಗೀತವನ್ನು ಕೇಳುತ್ತಾ ತನ್ನನ್ನು ತಾನೇ ಮೈಮರೆಯುತ್ತಿರಲು, ಪಕ್ಕದ ದೇವಾಲಯದಿಂದ ಸಂಧ್ಯಾರತಿಯ ಸದ್ದು ಕೇಳಲು, ಮಾಸ್ಟರ್ ದೇವಾಲಯದತ್ತ ನಡೆದರು.
ಈಗ ಸಂಜೆ ಕಳೆದಿತ್ತು, ಸೂರ್ಯ ತನ್ನ ಕಾರ್ಯವನ್ನು ಮುಗಿಸಿ ಮರೆಯಾಗಿದ್ದ, ಚಂದ್ರ ಆಗಷ್ಟೇ ಆಗಸದ ಮೇಲೆರಿದ್ದ, ಮಾಸ್ಟರ್ ಮತ್ತು ಸಿದ್ದು ಹತ್ತಿರದಲ್ಲಿದ್ದ ಹನ್ನೆರಡು ಶಿವ ದೇವಾಲಯ ಹಾಗೂ ರಾಧಾಕೃಷ್ಣ ದೇವಾಲಯವನ್ನು ಸಂದರ್ಶಿಸಿ , ಭವತಾರಿಣಿ ದೇವಾಲಯಕ್ಕೆ ಆಗಮಿಸಿದರು. ಭವತಾರಿಣಿ ದೇವಾಲಯವನ್ನು ಸಂದರ್ಶಿಸಿದ ಕೂಡಲೇ ಮಾಸ್ಟರ್ ಮಹಾಶಯರ ಕಂಗಳಲ್ಲಿ ಆನಂದಭಾಷ್ಟ ಹರಿಯುತ್ತಿತ್ತು.

ದೇವಾಲಯದಿಂದ ಹೊರಬಂದ ಗೆಳೆಯರಿಬ್ಬರು ಮತ್ತೆ ಶ್ರೀ ರಾಮಕೃಷ್ಣ ಪರಮಹಂಸರ ಕೊಠಡಿಯತ್ತ ನಡೆಯುತ್ತಾ ಭವತಾರಿಣಿ ದೇವಾಲಯದ ಕುರಿತು ಮಾತನಾಡುತ್ತಾ ದೇವಾಲಯದ ಇತಿಹಾಸವನ್ನು ಹೇಳುತ್ತಾ ರಾಣಿ ರಾಸಮಣಿ ದೇವಿಯು ನಿರ್ಮಿಸಿದ ಈ ದೇವಾಲಯದಲ್ಲಿ ಕಾಳಿ, ಕೃಷ್ಣ ಹಾಗೂ ಶಿವ ದೇವರ ಆರಾಧನೆ ನಡೆಯುತದೆ ಎಂದು ಸಿದ್ದು ತಿಳಿಸಿದ್ದ, ಹೀಗೆ ನಡೆಯುತ್ತಾ ಅವರು ಶ್ರೀ ರಾಮಕೃಷ್ಣರ ಕೊಠಡಿಯ ಬಳಿ ಬಂದಿದ್ದರು
ಠಾಕೂರರ ಕೊಠಡಿಯ ಬಾಗಿಲ ಬಳಿ ಬೃಂದೆಯು ನಿಂತದ್ದರು, ಮಾಸ್ಟರ್ ಮಹಾಶಯರು ಗೌರವದಿಂದ ಶ್ರಿ ರಾಮಕೃಷ್ಣರು ಕೊಠಡಿಯಲ್ಲಿದ್ದಾರೆಯೇ ಎಂದು ಕೇಳಲು, ಬೃಂದೆಯು ಹೌದು ಎಂದು ಉತ್ತರಿಸುತ್ತಾಳೆ,
ಮಾ: ಅವರು ಎಷ್ಟು ಸಮಯದಿಂದ ಇಲ್ಲಿ ನೆಲೆಸಿದ್ದಾರೆ ?
ಬೃಂದೆ: ಬಹಳ ಸಮಯದಿಂದ
ಮಾ; ಅವರು ಬಹಳಷಷ್ಟು ಪುಸ್ತಕಗಳನ್ನು ಓದುತ್ತಾರೆಯೇ ?
ಬೃಂದೆ ನಗುತ್ತಾ : ಇಲ್ಲವೇ ಇಲ್ಲ. . . ಎಲ್ಲಾ ಪುಸ್ತಕಗಳು ಅವರ ನಾಲಗೆಯಂಚಿನಲ್ಲೇ ಇವೆ..
ಮಾಸ್ಟರ್ ಮಹಾಶಯರು ಆಶ್ಚರ್ಯಚಕಿತರಾದರು
ಈಗ ಅವರ ಪೂಜಾ ಸಮಯವಾಗಿದೆ ನಾವು ಒಳ ಪ್ರವೇಶಿಸಬಹುದೇ ?
ಬೃಂದೆ : ನಗುತ್ತಾ. .  ಹೋಗಿ ಮಕ್ಕಳೇ ಹೋಗಿ.
ಮಾಸ್ಟರ್ ಮಹಾಶಯರು ಮತ್ತು ಸಿದ್ದು ಶ್ರೀ ರಾಮಕೃಷ್ಣರ ಕೊಠಡಿ ಪ್ರವೇಶಿಸುತ್ತಿದ್ದಂತೆಯೇ ಪ್ರಶಾಂತತೆಯಿಂದ ರಾಮಕೃಷ್ಣರತ್ತ ನೋಡಿದರು, ಶ್ರೀ ರಾಮಕೃಷ್ಣರು ಮಣೆಯ ಮೇಲೆ ಆಸೀನರಾಗಿದ್ದಾರೆ, ಗಂಧದ ಕಡ್ಡಿಯನ್ನು ಆಗಷ್ಟೇ ಹಚ್ಚಲಾಗಿದೆ, ಕೊಠಡಿಯ ಎಲ್ಲಾ ಬಾಗಿಲುಗಳು ಮುಚ್ಚಿವೆ , ಮಾಸ್ಟರ್ ಮಹಾಶಯರು ಶ್ರೀ ರಾಮಕೃಷ್ಣರನ್ನು ಕಂಡೊಡನೆಯೇ ವಿನಮ್ರತೆಯಿಂದ ನಮಸ್ಕರಿಸಿ, ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡರು, ಈಗ ಶ್ರೀ ರಾಮಕೃಷ್ಣರು ಮಾಸ್ಟರರನ್ನು ಪ್ರಶ್ನಿಸುತ್ತಿದ್ದಾರೆ
ಶ್ರೀ ರಾಮಕೃಷ್ಣರು : ಎಲ್ಲಿಂದ ಬಂದಿದ್ದೀರಿ? ನಿಮ್ಮ ವೃತ್ತಿಯೇನು ? ಬಾರಾನಗರಕ್ಕೆ ಬಂದ ಕಾರಣವೇನು ?

ಮಾಸ್ಟರ್ ಎಲ್ಲ ಪ್ರಶ್ನೆಗಳನ್ನು ಉತ್ತರಿಸಿದ್ದರು , ಆದರೆ ಆಗಾಗ ಮಾಸ್ಟರ್ ಮಹಾಶಯರು  ಎಲ್ಲೋ ಕಳೆದು ಹೋದವರಂತಿದ್ದರು, ಸ್ವಲ್ಪ ಸಮಯದ ಬಳಿಕ ಮಾಸ್ಟರ್ ಮಹಾಶಯರಿಗೆ ಇದು ಭಾಚಾವಸ್ಥೆ ಎಂದು ತಿಳಿದು ಬಂತು. ಹೀಗೆ ಮಾತಾನಾಡುತ್ತಾ  ಶ್ರೀ ರಾಮಕೃಷ್ಣರು ಆಗಾಗ್ಗೆ ಸಮಾಧಿಸ್ಥರಾಗುತ್ತಿದ್ದರು, ಮಾಸ್ಟರ್ ಮಹಾಶಯರಿಗೆ ಮೊದಮೊದಲು ಇದು ಏನು ಎಂದು ತಿಳಿಯದಿದ್ದರೂ, ಬಳಿಕ ಸಮಾಧಿ ಸ್ಥಿತಿಯ ಬಗ್ಗೆ ಅರಿತುಕೊಂಡರು
ಮಾ : ಠಾಕೂರರನ್ನು ಕುರಿತು : ನಿಮಗೆ ಈಗ ಸಂದ್ಯಾ ಪೂಜೆ ಮಾಡಲಿರುವುದೇ ? ನಾವಿನ್ನು ಹೊರಡುತ್ತೇವೆ
ಶ್ರಿ ರಾಮಕೃಷ್ಣರು : ಸಂದ್ಯಾ ಪೂಜೆ ??? ಇಲ್ಲ ಅಂಥದ್ದೇನೂ ಇಲ್ಲ …...
ಕೆಲ ಸಂಭಾಷಣೆಗಳ ಬಳಿಕ ಮಾಸ್ಟರ್ ರಾಮಕೃಸ್ಣರಿಗೆ ನಮಸ್ಕರಿಸಿ ಹೊರಡಲನುವಾದರು
ಶ್ರೀ ರಾಮಕೃಷ್ಣರು : ನಗುತ್ತಾ. . . ಹೋಗಿ ಬನ್ನಿ ಶುಭವಾಗಲಿ. .

ಮುಂದೆ ನಾಳೆ  . . . 

English Translation


March 1882
IT WAS ON A SUNDAY in spring, a few days after Sri Ramakrishna's birthday, that M. met him the first time. Sri Ramakrishna lived at the Kalibari, the temple garden of Mother Kali, on the bank or the Ganges at Dakshineswar.

M., being at leisure on Sundays, had gone with his friend Sidhu to visit several gardens at Baranagore. As they were walking in Prasanna Bannerji's garden, Sidhu said: "There is a charming place on the bank of the Ganges where a paramahamsa lives. Should you like to go there?" M. assented and they started immediately for the Dakshineswar temple garden. They arrived at the main gate at dusk and went straight to Sri Ramakrishna's room. And there they found him seated on a wooden couch, facing the east. With a smile on his face he was talking of God. The room was full of people, all seated on the floor, drinking in his words in deep silence.

M. stood there speechless and looked on. It was as if he were standing where all the holy places met and as if Sukadeva himself were speaking the word of God, or as it Sri Chaitanya were singing the name and glories of the Lord in Puri with Ramananda, Swarup, and the other devotees.

Sri Ramakrishna said: "When, hearing the name of Hari or Rama once, you shed tears and your hair stands on end, then you may know for certain that you do not have to perform such devotions as the sandhya any more. Then only will you have a right to renounce rituals; or rather, rituals will drop away of themselves. Then it will be enough it you repeat only the name of Rama or Hari, or even simply Om." Continuing, he said, "The sandhya merges in the Gayatri, and the Gayatri merges in Om."

M. looked around him with wonder and said to himself: "What a beautiful place! What a charming man! How beautiful his words are! I have no wish to move from this spot," After a few minutes he thought, "Let me see the place first; then I'll come back here and sit down."

As he left the room with Sidhu, he heard the sweet music of the evening service arising in the temple from gong, bell, drum, and cymbal. He could hear music from the nahabat, too, at the south end of the garden. The sounds travelled over the Ganges, floating away and losing themselves in the distance. A soft spring wind was blowing, laden with the fragrance of flowers; the moon had just appeared. It was as if nature and man together were preparing for the evening worship. M. and Sidhu visited the twelve Siva temples, the Radhakanta temple, and the temple of Bhavatarini. And as M. watched the services before the images his heart was filled with joy.

On the way back to Sri Ramakrishna's room the two friends talked. Sidhu told M. that the temple garden had been founded by Rani Rasmani. He said that God was worshipped there daily as Kali, Krishna, and Siva, and that within the gates many sadhus and beggars were fed. When they reached Sri Ramakrishna's door again, they found it shut, and Brinde, the maid, standing outside. M., who had been trained in English manners and would not enter a room without permission, asked her, "Is the holy man in?" Brinde replied, "Yes, he's in the room."

M: "How long has he lived here?"

BRINDE: "Oh, he has been here a long time."

M: "Does he read many books?"

BRINDE: "Books? Oh, dear no! They're all on his tongue."

M. had just finished his studies in college. It amazed him to hear that Sri Ramakrishna read no books.

M: "Perhaps it is time for his evening worship. May we go into the room? Will you tell him we are anxious to see him?"

BRINDE: "Go right in, children. Go in and sit down."

Entering the room, they found Sri Ramakrishna alone, seated on the wooden couch. Incense had just been burnt and all the doors were shut. As he entered, M. with folded hands saluted the Master. Then, at the Master's bidding, he and Sidhu sat on the floor. Sri Ramakrishna asked them: "Where do you live? What is your occupation? Why have you come to Baranagore?" M. answered the questions, but he noticed that now and then the Master seemed to become absent-minded. Later he learnt that this mood is called bhava, ecstasy. It is like the state of the angler who has been sitting with his rod: the fish comes and swallows the bait, and the float begins to tremble; the angler is on the alert; he grips the rod and watches the float steadily and eagerly; he will not speak to anyone. Such was the state of Sri Ramakrishna's mind. Later M. heard, and himself noticed, that Sri Ramakrishna would often go into this mood after dusk, sometimes becoming totally unconscious of the outer world.

M: "Perhaps you want to perform your evening worship. In that case may we take our leave?"

SRI RAMAKRISHNA (still in ecstasy): "No — evening worship? No, it is not exactly that."

After a little conversation M. saluted the Master and took his leave. "Come again", Sri Ramakrishna said.

 













Saturday 14 July 2018

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸ

ಸೆಪ್ಟೆಂಬರ್ 11 ಭಾರತೀಯರಿಗೆ ಮಹತ್ವದ ದಿನ. ಸೆಪ್ಟೆಂಬರ್ 11, 1893ರಂದು ಸ್ವಾಮಿ ವಿವೇಕಾನಂದರು ಭಾರತದ ಜ್ಯೋತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದ ಮಹತ್ವದ ದಿನ. ಸ್ವಾಮಿ ವಿವೇಕಾನಂದರ ಈ ಮಹತ್ಕಾರ್ಯದ ಕುರಿತು ಸೋದರಿ ನಿವೇದಿತಾ ಹೀಗೆ ಹೇಳಿದ್ದಾರೆ:
“ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ನೀಡಿದ ಉಪನ್ಯಾಸಗಳ ಸ್ವರೂಪವನ್ನು ಹೀಗೆ ಸಂಕ್ಷೇಪಿಸಬಹುದು: ಪ್ರಾರಂಭದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕುರಿತು ಹೇಳಹೊರಟರು. ಆದರೆ ಅವರು ತಮ್ಮ ಉಪನ್ಯಾಸ ಮುಗಿಸಿದಾಗ ಹಿಂದೂ ಧರ್ಮ ಪುನರ್ಸೃಷ್ಟಿಗೊಂಡಿತ್ತು.”
“ಏಕೆಂದರೆ ಸ್ವಾಮಿ ವಿವೇಕಾನಂದರು ತಮ್ಮ ಸ್ವಂತ ಅನುಭವವನ್ನು ನಿರೂಪಿಸುವುದಕ್ಕೆ ಹೊರಡಲಿಲ್ಲ. ತಮ್ಮ ಗುರುವಿನ ಜೀವನ ಚರಿತ್ರೆಯನ್ನು ನಿರೂಪಿಸುವುದಕ್ಕೂ ಆ ವೇದಿಕೆಯನ್ನು ಬಳಸಿಕೊಳ್ಳಲಿಲ್ಲ. ಅವೆರಡರ ಬದಲು ಪ್ರಾಚೀನ ಭರತಖಂಡ ರೂಪಿಸಿದ ಧಾರ್ಮಿಕ ಪ್ರಜ್ಞೆ, ತಮ್ಮ ದೇಶದ ಇಡೀ ಜನತೆಯ ಸಂದೇಶ ಸ್ವಾಮೀಜಿಯವರ ಮೂಲಕ ಅಲ್ಲಿ ಪ್ರಕಟಗೊಂಡವು. ನವತಾರುಣ್ಯದಲ್ಲಿದ್ದ ಪಶ್ಚಿಮದೇಶವನ್ನು ಉದ್ದೇಶಿಸಿ ಸ್ವಾಮೀಜಿ ಮಾತನಾಡುತ್ತಿದ್ದರು. ಅದು ಮಧ್ಯಾಹ್ನದ ಸಮಯ. ಅದೇ ಸಮಯದಲ್ಲಿ ಪೂರ್ವಾರ್ಧಗೋಳದ ಕತ್ತಲು ಕವಿದ ಭಾಗದಲ್ಲಿ, ಪೆಸಿಫಿಕ್ ಸಾಗರದ ಇನ್ನೊಂದು ಕಡೆಯಲ್ಲಿ ರಾಷ್ಟ್ರವೊಂದು ಮಲಗಿ ನಿದ್ರಿಸುತ್ತಿತ್ತು. ತನ್ನದೇ ಮಹತ್ವ, ಶಕ್ತಿಗಳ ರಹಸ್ಯವನ್ನು ಸ್ವಾಮೀಜಿಯ ಯಾವ ಮಾತುಗಳು ತೆರೆದು ಪಶ್ಚಿಮಕ್ಕೆ ತೋರಿದುವೋ ಅದನ್ನು ಮರುದಿನದ ಮುಂಬೆಳಗು ಹೊತ್ತು ತರುವುದನ್ನು ಆ ರಾಷ್ಟ್ರ ನಿರೀಕ್ಷಿಸುತ್ತಿತ್ತು.”

1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿಯವರು ನೀಡಿದ ಉಪನ್ಯಾಸ ಇಂತಿದೆ:
ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,
ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನುಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಇದೇ ವೇದಿಕೆಯ ಮೇಲೆ ನಿಂತು ಕೆಲವು ಭಾಷಣಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳನ್ನು ಕುರಿತು ಹೀಗೆ ಹೇಳಿದ್ದಾರೆ: ‘ಬಹಳ ದೂರದಿಂದ ಬಂದಿರುವ ಇವರು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವರು.’ ಹಾಗೆ ಹೇಳಿದ ಭಾಷಣಕಾರರಿಗೂ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರ ಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಯಾವ ವರ್ಷ ರೋಮನ್ನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳು ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು. ಝೊರತೂಷ್ಟ್ರ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೇನೆ:
“ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ.”
ಅತ್ಯಂತ ಮಹತ್ವಪೂರ್ಣವಾದ ಸಭೆಗಳಲ್ಲಿ ಒಂದು ಇಂದು ನೆರೆದಿರುವ ಈ ಸಭೆ. “ಯಾರೇ ಆಗಲಿ, ಯಾವುದೇ ರೂಪದಲ್ಲೇ ಆಗಲಿ ನನ್ನ ಬಳಿಗೆ ಬಂದರೆ ನಾನು ಅವರನ್ನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ” ಎಂಬ ಗೀತೆಯ ಅದ್ಭುತ ತತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ. ಇವು ಈ ಭೂಮಿಯನ್ನು ಹಿಂಸೆಯಿಂದ ತುಂಬಿವೆ, ಅದನ್ನು ಮತ್ತೆ ಮತ್ತೆ ನರರಕ್ತದಿಂದ ತೊಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರ ರಾಷ್ಟ್ರಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಇಂಥ ಭಯಂಕರ (ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು. ಆದರೆ ಅವರ ಕಾಲ ಮುಗಿದಿದೆ. ಇಂದು ಬೆಳಿಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ಎಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ.
ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.
ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.
ಸ್ವಾಮಿ ವಿವೇಕಾನಂದರ ಪಾದಪದ್ಮಗಳಿಗೆ ನಮ್ಮ ಅಭಿವಂದನೆಗಳು.

Friday 13 July 2018

ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ಸಂಬಂಧ


೧೮೬೩ನೇ ಇಸವಿ, ಜನವರಿ ೧೨ನೇ ತಾರೀಖಿನಂದು ಕಲ್ಕತ್ತದಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ದಂಪತಿಗಳಿಗೆ ಜನಿಸಿದ ನರೇಂದ್ರನಾಥ ದತ್ತ ಮುಂದೆ ಸ್ವಾಮಿ ವಿವೇಕಾನಂದ ಎಂಬ ನಾಮಧೇಯದಿಂದ ಜಗದ್ವಿಖ್ಯಾತರಾದರು. ೧೯೦೨ ಜುಲೈ ರಂದು ದೈಹಿಕ ಶರೀರವನ್ನು ತೊರೆದ ಸ್ವಾಮಿ ವಿವೇಕಾನಂದರು ಅಂದು ಹಚ್ಚಿದ ವೇದಾಂತದ ದೀವಿಗೆಯು ಇಂದೂ ಕೂಡ ಜಗತ್ತಿಗೆ ಬೆಳಕು ಚೆಲ್ಲುತ್ತಿದೆ. ತನ್ನ ಗುರು ಶ್ರೀ ರಾಮಕೃಷ್ಣರ ಸಂದೇಶಗಳಿಗೆ ದನಿಯಾದ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ಸಂಬಂಧ

ಶ್ರೀ ರಾಮಕೃಷ್ಣರ ಸಾಕ್ಷಾತ್ಕಾರದ ನಂತರ ಹಲವು ಮಂದಿ ಶಿಷ್ಯರು ಅವರನ್ನು ಅನುಸರಿಸಿದರು. ಅವರಲ್ಲೊಬ್ಬರು ಸ್ವಾಮಿ ವಿವೇಕಾನಂದರು. ಯುನೈಟಡ್ ಸ್ಟೇಟ್ಸ್ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಮೊಟ್ಟ ಮೊದಲ ಯೋಗಿ ವಿವೇಕಾನಂದರು, ಮೂಲಕ ಅಧ್ಯಾತ್ಮಿಕ ಅಲೆಯನ್ನೇ ಎಬ್ಬಿಸಿದರು. ನವ್ಯ ವಿಚಾರಗಳ ಕುರಿತು ಜನರಲ್ಲಿದ್ದ ವಿರೋಧ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಸಫಲರಾದರು.
ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣರ ಬಳಿಗೆ ಬಂದು ಕೇಳುತ್ತಾರೆ. "ನೀವು ಯಾವಾಗಲೂ ದೇವರು, ದೇವರು ಎನ್ನುತ್ತೀರಿ. ಎಲ್ಲಿದೆ ಪುರಾವೆ? ನನಗೆ ಪುರಾವೆ ಬೇಕು"
ರಾಮಕೃಷ್ಣರಿಗೆ ವಿವೇಕಾನಂದರ ಮೇಲಿದ್ದ ಪ್ರೇಮವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತವಾದ ವ್ಯಕ್ತಿಯೇ ವಿವೇಕಾನಂದ ಎಂಬ ಸಂಪೂರ್ಣ ಅರಿವು ಅವರಿಗಿತ್ತು
ಅವರ ಸುತ್ತಲಿದ್ದ ಅನೇಕರಿಗೆ ರಾಮಕೃಷ್ಣರ ಹುಚ್ಚು ಮೋಹ ವಿಚಿತ್ರವೆನಿಸುತ್ತಿತ್ತು. ವಿವೇಕಾನಂದರು ಗುರುವನ್ನು ನೋಡಲು ಒಂದು ದಿನ ಬರದಿದ್ದರೂ, ಸ್ವತಃ ತಾವೇ ಶಿಷ್ಯನನ್ನರಸಿ ಹೋಗುತ್ತಿದ್ದರು. ಯಾಕೆಂದರೆ ತಮ್ಮ ಸಂದೇಶವನ್ನು ಲೋಕದಲ್ಲಿ ಪ್ರಸರಿಸಲು ಅಗತ್ಯವಾದ ಗ್ರಹಿಕಾಸಾಮರ್ಥ್ಯವು ಯುವಕನಲ್ಲಿದೆ ಎಂದು ಅವರು ತಿಳಿದಿದ್ದರು. ಸ್ವತಃ ವಿವೇಕಾನಂದರೂ ರಾಮಕೃಷ್ಣರ ಕುರಿತು ಅಷ್ಟೇ ಆಕರ್ಷಿತರಾಗಿದ್ದರು. ತನ್ನ ವಯಸ್ಸಿನ ಇತರ ಯುವಕರಂತೆ ಉದ್ಯೋಗ ಅಥವಾ ಆಕರ್ಷಣೆ ಇತ್ಯಾದಿಗಳೆಡೆಗೆ ಸಾಗದೇ ಸದಾ ರಾಮಕೃಷ್ಣರನ್ನೇ ಅನುಸರಿಸಿ ಹೋಗುತ್ತಿದ್ದರು.
ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಆಶ್ಚರ್ಯಕರವಾದ ಘಟನೆಯಿದೆ. ಅವರ ತಾಯಿ ತೀವ್ರವಾದ ಖಾಯಿಲೆಯಿಂದ ಮರಣಶಯ್ಯೆಯಲ್ಲಿದ್ದರು. ವಿವೇಕಾನಂದರಿಗೆ ತಮ್ಮ ಬಳಿ ತಾಯಿಗೆ ಅಗತ್ಯವಾದ ಆಹಾರ, ಔಷಧೋಪಚಾರಗಳಿಗೆ ಹಣವಿಲ್ಲವೆಂಬ ಅರಿವಾಯಿತು. ತಾಯಿಯನ್ನು ಸೂಕ್ತವಾಗಿ ಉಪಚರಿಸಲಾಗದ ತನ್ನ ಸ್ಥಿತಿಯ ಬಗ್ಗೆ ಅವರಿಗೆ ಬಹಳ ಕೋಪವುಂಟಾಯಿತು. ವಿವೇಕಾನಂದರಂಥವರ ಕೋಪವೆಂದರೆ ಅದು ತೀವ್ರವಾದ ಕೋಪ. ಸೀದಾ ರಾಮಕೃಷ್ಣರ ಬಳಿಗೆ ಹೋದರು - ಹೋಗಲು ಬೇರೆ ಜಾಗವೂ ಇರಲಿಲ್ಲ, ಕೋಪ ಬಂದಾಗಲೂ ಅವರು ಹೋಗುತ್ತಿದ್ದುದು ಅಲ್ಲಿಗೇ.


ಹೋಗಿ ರಾಮಕೃಷ್ಣರಿಗೆ ಹೇಳಿದರು "ಅಧ್ಯಾತ್ಮವಂತೆ, ಸಾಕ್ಷಾತ್ಕಾರವಂತೆ! ಅಸಂಬದ್ಧ ನನ್ನನ್ನು ಎಲ್ಲಿಗೆ ಒಯ್ಯುತ್ತಿದೆ? ಉದ್ಯೋಗಕ್ಕೆ ಸೇರಿ, ನನ್ನ ಕರ್ತವ್ಯ ನಿರ್ವಹಿಸಿದ್ದರೆ, ಇಂದು ನಾನು ನನ್ನ ತಾಯಿಯನ್ನು ಸೂಕ್ತವಾಗಿ ನೋಡಿಕೊಳ್ಳಬಹುದಿತ್ತು. ಅವಳಿಗೆ ಬೇಕಾದ ಆಹಾರ, ಔಷಧ, ಉಪಚಾರ ಎಲ್ಲವನ್ನೂ ನೀಡಬಹುದಿತ್ತು. ಅಧ್ಯಾತ್ಮ ನನ್ನನ್ನು ಯಾವ ಸ್ಥಿತಿಗೆ ತಂದಿದೆ ನೋಡಿ"
ರಾಮಕೃಷ್ಣರು ಕಾಳಿಕಾದೇವಿಯ ಭಕ್ತರಾಗಿದ್ದು, ಅವರ ಮನೆಯಲ್ಲಿಯೇ ದೇವಿಯ ಗುಡಿಯಿತ್ತು. ಅವರೆಂದರು " ಓಹ್! ನಿಮ್ಮ ತಾಯಿಯವರಿಗೆ ಆಹಾರ ಮತ್ತು ಔಷಧದ ಅಗತ್ಯವಿದೆಯೆ? ಹಾಗಿದ್ದರೆ ನೀನೇಕೆ ತಾಯಿಯ ಬಳಿ ಹೋಗಿ ಬೇಡಬಾರದು?"
ವಿವೇಕಾನಂದರಿಗೆ ಅದು ಒಳ್ಳೆಯ ಸಲಹೆಯೆಂದು ತೋರಿತು. ಸೀದಾ ಕಾಳಿಕಾಮಾತೆಯ ಬಳಿ ಹೋದರು. ಒಂದು ಗಂಟೆಯ ನಂತರ ಗುರುವಿನ ಬಳಿ ಮರಳಿದಾಗ ಗುರು ಪ್ರಶ್ನಿಸುತ್ತಾರೆ. "ನಿಮ್ಮ ತಾಯಿಗೆ ಬೇಕಾದ ಆಹಾರ, ಔಷಧಿ ಇತ್ಯಾದಿಗಳನ್ನು ದೇವಿಯ ಬಳಿ ಕೇಳಿಕೊಂಡೆಯಾ?"
"ಇಲ್ಲ. ಮರೆತುಬಿಟ್ಟೆ" ವಿವೇಕಾನಂದರ ಉತ್ತರ.
ಗುರುವೆನ್ನುತ್ತಾರೆ "ಹೋಗು, ಮತ್ತೆ ಪ್ರಾರ್ಥಿಸು."
ಮತ್ತೆ ನಾಲ್ಕು ಗಂಟೆಗಳ ಬಳಿಕ ಬಂದಾಗಲೂ ಅದೇ ಉತ್ತರ ದೊರೆಯುತ್ತದೆ. ಪುನಃ ದೇವಿಯಲ್ಲಿಗೆ ಬೇಡಲು ಕಳಿಸುತ್ತಾರೆ "ಮತ್ತೆ ಹೋಗು, ಬಾರಿ ಮರೆಯಬೇಡ".
ಬಾರಿ ಎಂಟು ಗಂಟೆಗಳ ನಂತರ ಹೊರಗೆ ಬಂದ ವಿವೇಕಾನಂದರೆನ್ನುತ್ತಾರೆ. "ಇಲ್ಲ. ದೇವಿಯನ್ನು ನಾನೇನೂ ಕೇಳುವುದಿಲ್ಲ. ಕೇಳಬೇಕಾಗಿಯೂ ಇಲ್ಲ."
ರಾಮಕೃಷ್ಣರೆನ್ನುತ್ತಾರೆ. "ಒಳ್ಳೆಯದು, ನೀನು ಜಗನ್ಮಾತೆಯ ಬಳಿ ಕೋರಿಕೆಗಳನ್ನಿಟ್ಟಿದ್ದರೆ ನನ್ನ ನಿನ್ನ ಸಂಬಂಧ ಇಂದಿಗೇ ಕೊನೆಗಾಣುತ್ತಿತ್ತು. ನಾನು ಪುನಃ ನಿನ್ನನ್ನು ನೋಡುತ್ತಿರಲಿಲ್ಲ. ಬೇಕು ಬೇಕು ಎಂದೆನ್ನುವವನು ಜೀವನದ ಮೂಲಭೂತ ಸತ್ಯವನ್ನು ಅರಿಯದ ಮೂರ್ಖನೇ ಸರಿ.
ಪ್ರಾರ್ಥನಾಭಾವನೆಯು ಒಂದು ವಿಶಿಷ್ಟವಾದ ಗುಣ. ಸ್ವಭಾವತಃ ಪ್ರಾರ್ಥನಾಪೂರ್ಣರಾಗಿರುವುದು, ಆರಾಧನಾಪೂರ್ಣರಾಗಿರುವುದು ಜೀವಿಸಲು ಒಂದು ಸುಂದರವಾದ ರೀತಿ. ಆದರೆ ಏನೋ ಒಂದು ಬೇಕು ಎಂದು ನಿರೀಕ್ಷೆಯನ್ನಿಟ್ಟುಕೊಂಡು ಪ್ರಾರ್ಥಿಸಿದರೆ ಅದು ನಿಮ್ಮನ್ನು ಗುರಿ ಮುಟ್ಟಿಸಲಾರದು.
ದೇವರ ಅಸ್ತಿತ್ವದ ಪುರಾವೆಗಳು
ಕೇವಲ ೧೯ ವರ್ಷವಾಗಿದ್ದಾಗಲೇ ವಿವೇಕಾನಂದರು ಬಹಳ ತಾರ್ಕಿಕ, ತೀಕ್ಷ್ಣಮತ್ತೆಯ ಮತ್ತು ಕ್ಷಾತ್ರತೇಜದ ಯುವಕ. ಪ್ರತಿಯೊಂದಕ್ಕೂ ತಾರ್ಕಿಕ ಉತ್ತರ ನಿರೀಕ್ಷಿಸುವ ಹುಮ್ಮಸ್ಸು. "ದೇವರು, ದೇವರು, ಎಂದು ಹೇಳುತ್ತೀರಲ್ಲಾ, ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು. ತೋರಿಸಿ" ಎಂದು ರಾಮಕೃಷ್ಣರನ್ನು ಕೇಳಿದರು.
ರಾಮಕೃಷ್ಣ ಪರಮಹಂಸರು ಸರಳವಾದ ವ್ಯಕ್ತಿ. ವಿದ್ಯಾವಂತರಲ್ಲ. ಸಾಕ್ಷಾತ್ಕಾರ ಪಡೆದಿದ್ದ ಅತೀಂದ್ರಿಯ ವ್ಯಕ್ತಿ. ಆದರೆ ಪಂಡಿತರಲ್ಲ. ಹಾಗಾಗಿ ಸರಳವಾಗೆಂದರು. "ನಾನೇ ಪುರಾವೆ. ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ."
ರಾಮಕೃಷ್ಣರು ಹೇಳಿದರು, “ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ.”
ವಿವೇಕಾನಂದರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಗೊಂದಲಗೊಂಡರು. ನಿರೀಕ್ಷಿಸಿದ್ದು ವಿದ್ವತ್ಪೂರ್ಣವಾದ ಉತ್ತರವನ್ನು - "ದೇವರಿದ್ದಾನೆ ಎಂಬುದಕ್ಕೆ ಬೀಜ ಮೊಳಕೆಯೊಡೆಯುವುದೇ ಸಾಕ್ಷಿ. ಸೌರಮಂಡಲದ ಚಲನೆಯೇ ಸಾಕ್ಷಿ" ಇಂತಹವುಗಳನ್ನು. ಆದರೆ ಗುರುವಿನಿಂದ ಬಂದ ಉತ್ತರಕ್ಕೆ ನಿರುತ್ತರನಾದ ವಿವೇಕಾನಂದ ಅಲ್ಲಿಂದ ನಿರ್ಗಮಿಸಿದ.
ಮೂರು ದಿನಗಳ ನಂತರ ಪುನಃ ಗುರುವನ್ನು ಕೇಳುತ್ತಾನೆ. " ಸರಿ ಹಾಗಿದ್ದರೆ ನನಗೆ ದೇವರನ್ನು ತೋರಿಸಿ."
"ನಿನಗೆ ನೋಡುವ ಧೈರ್ಯವಿದೆಯೆ?" ಗುರುವಿನ ಪ್ರಶ್ನೆ.
"ಇದೆ" ಕೆಚ್ಚೆದೆಯ ಯುವಕನ ಉತ್ತರ. ಅವನ ಪ್ರಶ್ನೆಯು ಹುಟ್ಟಿಸಿದ ತಳಮಳ ಅವನೊಳಗೆ ಕುದಿಯುತ್ತಿತ್ತು.
ರಾಮಕೃಷ್ಣರು ತಮ್ಮ ಪಾದವನ್ನೆತ್ತಿ ವಿವೇಕಾನಂದರ ಎದೆಯ ಮೇಲಿಡುತ್ತಾರೆ. ಅಷ್ಟೇ! ದೇಹ, ಮನಸ್ಸಿನ ಪರಿಧಿಯಾಚೆಗಿನ ಸಮಾಧಿಸ್ಥಿತಿಗೆ ಹೋದ ವಿವೇಕಾನಂದರು ಅದರಿಂದ ಬಾಹ್ಯಲೋಕಕ್ಕೆ ಮರಳಿದ್ದು ಬರೋಬ್ಬರಿ ಹನ್ನೆರಡು ತಾಸುಗಳ ನಂತರವೇ. ಮತ್ತೆ ಅವರೆಂದೂ ಹಳೆಯ ನರೇಂದ್ರನಾಗಿ ಉಳಿಯಲಿಲ್ಲ. ತಮ್ಮ ಜೀವಮಾನದಲ್ಲಿ ಮತ್ತೆಂದೂ ರಾಮಕೃಷ್ಣರನ್ನು ಪ್ರಶ್ನೆ ಮಾಡಲಿಲ್ಲ.
ಶಾರದಾಮಾತೆಯ ಆಶೀರ್ವಾದ
ನೀವು ಭಕ್ತಿನಿಷ್ಠರಾಗದ ಹೊರತು ಜೀವನದ ರಹಸ್ಯ ನಿಮಗರಿವಾಗುವುದಿಲ್ಲ. ಹಾಗೇನಾದರೂ ಆದರೆ ನೀವೂ ಹಾನಿಗೊಳಗಾಗುವಿರಲ್ಲದೆ, ಬೇರೆಯವರಿಗೂ ಹಾನಿಯುಂಟುಮಾಡಬಲ್ಲಿರಿ. ಭಕ್ತಿಯನ್ನು ಅರಿಯದವರಿಗೆ ಭಾರತದಲ್ಲಿ ಜ್ಞಾನವನ್ನು ಎಂದೂ ಧಾರೆಯೆರಯಲಾಗುತ್ತಿರಲಿಲ್ಲ.
ಸ್ವಾಮಿ ವಿವೇಕಾನಂದರ ಜೀವನದಲ್ಲೊಂದು ಸುಂದರವಾದ ಘಟನೆಯಿದೆ. ರಾಮಕೃಷ್ಣ  ಪರಮಹಂಸರ ದೇಹಾಂತ್ಯವಾದ ನಂತರ ವಿವೇಕಾನಂದರು ಒಂದಿಷ್ಟು ಯುವಕರ ಗುಂಪಿನೊಡನೆ ನವಭಾರತ ನಿರ್ಮಾಣಕ್ಕಾಗಿ ಪ್ರಯತ್ನಿಸುತ್ತಾ ದೇಶದುದ್ದಕ್ಕೂ ಪ್ರವಾಸ ಮಾಡತೊಡಗುತ್ತಾರೆ. ಆಗ ಯಾರೋ ಕೆಲವರು, ಯುನೈಟೆಡ್ ಸ್ಟೇಟ್ಸ್ ಶಿಕಾಗೋದಲ್ಲಿ ನಡೆಯಲಿರುವ ಸರ್ವ ಧರ್ಮಸಮ್ಮೇಳನದ ಕುರಿತು ತಿಳಿಸಿ ಅಲ್ಲಿಗೆ ಹೋಗಿ ತಮ್ಮ ಚಿಂತನೆಗಳನ್ನು ಮಂಡಿಸಬಹುದೆಂದು ಸಲಹೆ ಕೊಟ್ಟರು. ಯಾಕೆಂದರೆ ಇಲ್ಲಿ ವಿವೇಕಾನಂದರ ಮಾತುಗಳಿಗೆ ಯಾರೂ ಕಿವಿಗೊಡುತ್ತಿರಲಿಲ್ಲ. ತರುಣನೊಬ್ಬ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸದ ಗಂಭೀರ ವಿಷಯಗಳನ್ನು ಜನರಿಗೆ ತಲುಪಿಸಲು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ ಅದನ್ನು ಯಾರು ಕೇಳುತ್ತಾರೆ? ಹಾಗಾಗಿ ಅವರು ಸೂಚಿಸಿದರು "ನೀವು ಶಿಕಾಗೋಗೆ ಹೋಗಿ. ಅಲ್ಲಿ ನಿಮ್ಮ ವಿಚಾರಗಳಿಂದ ಅಲೆಯೆಬ್ಬಿಸಿ. ಅಲ್ಲಿ ಎದ್ದ ಅಲೆಯಿಂದಾಗಿ ಇಲ್ಲಿಯೂ ಎಲ್ಲರೂ ನಿಮ್ಮೆಡೆಗೆ ಗಮನ ಹರಿಸುವರು"
ಶ್ರೀ ರಾಮಕೃಷ್ಣ ಪರಮಹಂಸರ ವಾಣಿಗಳನ್ನು ಜಗತ್ತಿಗೆ ಪರಿಚಯಿಸಲು ಪಶ್ಚಿಮಕ್ಕೆ ಪ್ರಯಾಣಿಸುವ ಮುನ್ನ ವಿವೇಕಾನಂದರು ಶ್ರೀ ಶಾರದಾ ದೇವಿಯಲ್ಲಿಗೆ ಹೋಗಿ ಆಶೀರ್ವಾದ ಬೇಡುತ್ತಾರೆ. ಸಮಯದಲ್ಲಿ ಶಾರದಾದೇವಿ ಹಾಡೊಂದನ್ನು ಹಾಡುತ್ತಾ ಅಡಿಗೆಯಲ್ಲಿ ತೊಡಗಿರುತ್ತಾರೆ. ಭಾರತದಲ್ಲಿ ಅಡುಗೆ ಮಾಡುವಾಗ ಹಾಡುಗಳನ್ನು, ಸ್ತೋತ್ರಗಳನ್ನು ಹಾಡುತ್ತಾ ಮಾಡುವುದು ಬಹಳ ಸಾಮಾನ್ಯವಾದ ವಿಷಯ ಆದರೆ ಮೊದಲಿಗೆ ಅಡುಗೆಯೆಂದರೆ ತಾಯಿಯರಿಗೆ ಪೂಜೆಯಂತೆ, ವ್ರತದಂತೆ. ಪ್ರೇಮದಿಂದ ಅಡುಗೆ ಮಾಡಿ ಬಡಿಸಿದ್ದನ್ನು ಸಂತೃಪ್ತಿಯಿಂದ ತಿನ್ನುವುದನ್ನು ನೋಡುವುದೇ ಅವರಿಗೆ ಪರಮ ಸಂತೋಷ. ಅಡುಗೆಯೆನ್ನುವುದು ಬಹಳ ವಿವರವಾಗಿ ನಡೆಯುವ ಸಂತೋಷದ ಕ್ರಿಯೆಯಾಗಿತ್ತು. ಇಪ್ಪತ್ತು-ಮೂವತ್ತು ನಿಮಿಷದ ಭೋಜನಕ್ಕಾಗಿ ಕಡಿಮೆಯೆಂದರೂ - ಗಂಟೆಗಳ ಕಾಲ ಶ್ರದ್ದೆಯಿಂದ ಅಡುಗೆ ತಯಾರಿಸುತ್ತಿದ್ದರು. ಮತ್ತು ಪೂರ್ತಿ ಸಮಯ ಹಾಡು, ದೇವರ ನಾಮ ಮುಂತಾದವುಗಳನ್ನು ಹಾಡುತ್ತಲೇ ಅಡುಗೆ ಮಾಡುತ್ತಿದ್ದರು. ನನ್ನ ತಾಯಿಯಂತೂ ಯಾವಾಗಲೂ ಹಾಡಿಕೊಳ್ಳುತ್ತಿದ್ದರು.


"ನಾನು ಗುರುಗಳ ಸಂದೇಶಗಳನ್ನು ಜಗತ್ತಿಗೆ ತಲುಪಿಸಲು ಯುನೈಟೆಡ್ ಸ್ಟೇಟ್ಸ್ ಗೆ ಹೊರಡಲು ಸಿದ್ಧನಾಗಿದ್ದೇನೆ."  ವಿವೇಕಾನಂದರ ಮಾತಿಗೆ ಮಾತೆ ಶಾರದಾದೇವಿ ಏನೂ ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ "ನರೇನ್, ಚಾಕುವನ್ನಿತ್ತ ಕೊಡು" ಎಂದು ತೋರಿಸುತ್ತಾರೆ. ವಿವೇಕಾನಂದರು ನಮ್ರತೆಯಿಂದ ಚಾಕುವನ್ನೆತ್ತಿಕೊಂಡು ಶಾರದಾದೇವಿಗೆ ನೀಡುತ್ತಾರೆ. ನಂತರ ಆಕೆ "ನಿನಗೆ ನನ್ನ ಆಶೀರ್ವಾದವಿದೆ. ಹೋಗಿ ಬಾ." ಎನ್ನುತ್ತಾರೆ. "ನೀವೇಕೆ ಆಶೀರ್ವದಿಸಲು ಇಷ್ಟು ಸಮಯ ತೆಗೆದುಕೊಂಡಿರಿ? ಅಲ್ಲದೇ ನಿಮ್ಮ ಅಡುಗೆಗೆ ಬೇಕಾದ ತರಕಾರಿ ಕತ್ತರಿಸಿಯಾಗಿದೆ. ಆದರೂ ಚಾಕುವನ್ನೇಕೆ ನನ್ನಿಂದ ತೆಗೆದುಕೊಂಡಿರಿ?" ವಿವೇಕಾನಂದರು ಕೇಳುತ್ತಾರೆ.
ಶಾರದಾದೇವಿ ಉತ್ತರಿಸುತ್ತಾರೆ " ಗುರುಗಳು ಹೋದ ನಂತರ ನೀನು ಹೇಗಿದ್ದೀ ಎಂದು ನನಗೆ ತಿಳಿಯಬೇಕಾಗಿತ್ತು. ಈಗ ನೀನು ಚೂರಿಯನ್ನು ನನ್ನ ಕೈಗಿಡುವ ಒಂದು ರೀತಿಯಲ್ಲೇ ನೀನು ಸಮರ್ಥನಿದ್ದೀಯೆ, ಗುರುಗಳ ಸಂದೇಶಗಳನ್ನು ಸಮರ್ಥವಾಗಿ ತಲುಪಿಸಬಲ್ಲೆ ಎಂದು ಸಿದ್ಧಪಡಿಸಿತು "
ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣರ ಸಂದೇಶ
ಗುರುಗಳಲ್ಲಿ ಅನೇಕರು ತಮ್ಮಷ್ಟಕ್ಕೇ ಪ್ರಸಿದ್ದಿಗೆ ಬರಲಾರರು. ಜಗತ್ತಿನ ಆಗುಹೋಗುಗಳ ಕುರಿತಾಗಿ ಅಷ್ಟಾಗಿ ಪ್ರಾಜ್ಞರಲ್ಲದ ಅಂತಹ ಗುರುಗಳ ಸಂದೇಶಗಳನ್ನು ಜನರತ್ತ ಕೊಂಡೊಯ್ಯಲು ಸಮರ್ಥ ಶಿಷ್ಯರ ಅವಶ್ಯಕತೆಯಿರುತ್ತದೆ. ಇಂದು ಎಲ್ಲರೂ ಶ್ರೀ ರಾಮಕೃಷ್ಣರ ಕುರಿತು ಮಾತನಾಡುತ್ತಾರೆ. ರಾಮಕೃಷ್ಣರು ಸ್ಫಟಿಕದಷ್ಟು ಸ್ಫುಟವಾದ ಜ್ಞಾನಿ. ಅವರೊಬ್ಬ ಅಪೂರ್ವ ಸಂಭವ. ಆದರೆ ಅದೇ ಸಮಯಕ್ಕೆ ಜಗತ್ತಿನ ಕಣ್ಣಲ್ಲಿ ಅವರು ನಿರಕ್ಷರ ಕುಕ್ಷಿ. ವಿವೇಕಾನಂದರ ಆಗಮನವಾಗದಿದ್ದರೆ ಅವರೆಲ್ಲೋವನಕುಸುಮದಂತೆ ಅಜ್ಞಾತವಾಗಿ ಉಳಿದುಬಿಡುತ್ತಿದ್ದರೇನೋ. ಅಸಂಖ್ಯಾತ ಹೂವುಗಳರಳುತ್ತವೆ. ಎಷ್ಟು ತಾನೇ ಗುರುತಿಸಲ್ಪಡುತ್ತವೆ?
ಪ್ರಾರ್ಥನೆಯ ಕುರಿತು ವಿವೇಕಾನಂದರು
ಸ್ವಾಮಿ ವಿವೇಕಾನಂದರು ಒಂದು ಕಡೆಯಲ್ಲಿ ಹೇಳುತ್ತಾರೆ "ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀಕತೆಯತ್ತ ಕೊಂಡೊಯ್ಯಬಲ್ಲದು"
ಇದು ನಿಜ. ಏಕೆಂದರೆ ಪೂರ್ತಿ ಚಿತ್ತೈಕಾಗ್ರತೆಯಿಲ್ಲದೇ ನೀವು ಚೆಂಡನ್ನು ಗುರಿಯತ್ತ ಕೊಂಡೊಯ್ಯಲಾರಿರಿ. ಇದರಲ್ಲಿ ವೈಯಕ್ತಿಕ ಉದ್ದೇಶವಿಲ್ಲ, ಕೇವಲ ಒಳಗೊಳ್ಳುವಿಕೆಯಿರುತ್ತದೆ. ನೀವೇನು ಮಾಡಬಲ್ಲಿರಿ, ಏನು ಮಾಡಲಾರಿರಿ ಎಂಬುದು ಮೊದಲೇ ನಿಗದಿತವಾಗಿರುತ್ತದೆ, ಮತ್ತು ನೀವು ಅನೇಕ ವರ್ಷಗಳ ತರಬೇತಿಯನ್ನು ಪಡೆದಿರುತ್ತೀರಿ. ಆಡುವ ಕ್ಷಣದಲ್ಲಿ ಬೇಕಿರುವುದು, ಕೇವಲ ಗಾಢವಾದ ಒಳಗೊಳ್ಳುವಿಕೆ ಮಾತ್ರವೇ, ಯಾವುದೇ ಉದ್ದೇಶವಲ್ಲ.
ಹಾಗಾಗಿಯೇ ವಿವೇಕಾನಂದರು ಕಾಲ್ಚೆಂಡಾಟದ ಕುರಿತು ಮೇಲಿನಂತೆ ಹೇಳಿದ್ದು. ಪ್ರಾರ್ಥನೆ ಕ್ರಮೇಣ ಯಾಂತ್ರಿಕವಾಗಬಹುದು. ಅದರೊಂದಿಗೆ ಅನೇಕ ಇತರ ಸಂಗತಿಗಳನ್ನು ನೀವು ನಡೆಸುತ್ತಿರಬಹುದು. ನಮ್ಮ ದೇಶದಲ್ಲಿ ಪ್ರಾರ್ಥನೆಗಳು ಕೇವಲ ಶಾಬ್ದಿಕವಾಗಿರದೆ ಬಹಳ ಸಂಕೀರ್ಣವಾಗಿವೆ. ಯಾಂತ್ರಿಕ ಉಚ್ಛಾರಣೆಯ ಪ್ರಾರ್ಥನೆಗಳನ್ನು ನೋಡಿ ಮಂತ್ರೋಚ್ಚಾರಣೆಗಳನ್ನು, ಪೂಜಾ ಪದ್ಧತಿಗಳನ್ನು ಸಂಕೀರ್ಣವಾಗಿಸಲಾಯಿತು. ನೀವು ಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳದೇ ಅವುಗಳನ್ನು ಮಾಡುವುದು ಅಸಾಧ್ಯ.

ಹಾಗಾಗಿ ನೀವು ಏಕಾಗ್ರತೆಯಿಲ್ಲದೇ ಅದನ್ನು ನೆರವೇರಿಸಿದರೆ ಅದು ಧರ್ಮದ್ರೋಹವಾದೀತು. ಪಾವಿತ್ರ್ಯ ಭಂಗವಾದೀತು. ಹಾಗೆಯೇ ಕಾಲ್ಚೆಂಡಾಟವು ನಿಮ್ಮಲ್ಲಿ ಹಂತದ ತೊಡಗಿಸಿಕೊಳ್ಳುವಿಕೆಯನ್ನು ಉಂಟುಮಾಡುತ್ತದೆ. ಆಟವಾಡುವಾಗ ಬೇರೇನನ್ನೂ ಮಾಡುವುದು ಅಸಾಧ್ಯ.
ಫುಟ್ಬಾಲ್ ಆಟದಲ್ಲಿ ನೀವು ನಿಮ್ಮ ಪಾದಗಳನ್ನು ಶಸ್ತ್ರಚಿಕಿತ್ಸಕನ (ಸರ್ಜನ್) ಬ್ಲೇಡ್ ನಂತೆ ಉಪಯೋಗಿಸಬೇಕಾದ ಅಗತ್ಯವಿದೆ. ನಿಮ್ಮ ಪಾದಗಳು ಚೆಂಡನ್ನು ನಿರ್ವಹಿಸುವ ಜೊತೆಗೇ ನಿಮ್ಮನ್ನೂ ಅತ್ತಿತ್ತ ಸಾಗಿಸುವ ಕಾರ್ಯವನ್ನು ಏಕಕಾಲಕ್ಕೆ ಮಾಡಬೇಕಾಗಿರುವುದರಿಂದ ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅದೇ ಸಮಯಕ್ಕೆ ನಿಮ್ಮ ಗುರಿಯಿಂದ ನಿಮ್ಮನ್ನು ದೂರಮಾಡಲು ಕಾದಿರುವ ಉಳಿದ ಹತ್ತು ಜನರ ಅಡೆತಡೆಗಳನ್ನೂ ನಿವಾರಿಸಿಕೊಳ್ಳಬೇಕಾಗುತ್ತದೆ. ಜನರಿಂದ ನುಣುಚಿಕೊಳ್ಳಬೇಕು, ಚೆಂಡನ್ನು ನಿಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು, ಓಡುತ್ತಲೂ ಇರಬೇಕು. ಅವೆಲ್ಲವನ್ನೂ ಗತಿಯಲ್ಲಿ ನಿರ್ವಹಿಸಲು ನಿಮ್ಮ ಪಾದಗಳು ಸರ್ಜನರ ಚೂರಿಯಂತೆ ಸಕ್ಷಮವಾಗಿರಬೇಕು. ವೇಗದಲ್ಲಿ, ಚಟುವಟಿಕೆಯ ಮಧ್ಯೆ ಚೆಂಡಿನ ಚಲನೆಯನ್ನು ನಿರ್ದೇಶಿಸಲು ಪ್ರಚಂಡ ಕೌಶಲದ ಅಗತ್ಯವಿದೆ. ಅಲ್ಲಿಯೇ ನಿಮ್ಮ ಸಂಪೂರ್ಣ ಒಳಗೊಳ್ಳುವಿಕೆಯ ಪರೀಕ್ಷೆ. ಅಲ್ಲಿ ನೀವು ಹೆಚ್ಚುಕಮ್ಮಿ ಮನೋರಹಿತವಾಗಿರುತ್ತೀರಿ.
ನೀವು ಯಾವುದರಲ್ಲಿಯೇ ಆಗಲಿ, ಸಂಪೂರ್ಣ ತೊಡಗಿಸಿಕೊಂಡಾಗ, ಅಲ್ಲಿ ಕೇವಲ ಕ್ರಿಯೆ ಜಾರಿಯಲ್ಲಿರುತ್ತದೆ. ಮನ ತಟಸ್ಥವಾಗಿರುತ್ತದೆ. ಹಾಗಾಗಿ ಫುಟ್ಬಾಲ್ ಪಂದ್ಯದಲ್ಲಿ ಆಟಗಾರರು ಅಂತಹ ಏಕಾಗ್ರತೆಯನ್ನು ತಲುಪುತ್ತಾರೆ. ಅದೇ ವೇಳೆಗೆ, ಪಂದ್ಯವನ್ನು ವೀಕ್ಷಿಸುವ ಜಗತ್ತಿನ ಅರ್ಧದಷ್ಟು ಮಂದಿ, ಅದೇ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ. ಅದು ಆಧ್ಯಾತ್ಮಿಕ ಅನುಭವವಲ್ಲದಿದ್ದರೂ ಒಂದು ರೀತಿಯ ಇಂದ್ರಿಯಾತೀತ ಅನುಭವವೇ. ಒಬ್ಬ ಆಟಗಾರನ ತಲ್ಲೀನತೆಯ ಕಿಡಿ ಪ್ರತಿ ವೀಕ್ಷಕರಲ್ಲೂ ಕಿಡಿಯನ್ನು ಹುಟ್ಟಿಸಬಲ್ಲದು.
 
ಮಹಿಳೆಯರ ಕುರಿತು ಸ್ವಾಮಿ ವಿವೇಕಾನಂದ
ಒಮ್ಮೆ, ಓರ್ವ ಸಮಾಜಸುಧಾರಕ, ವಿವೇಕಾನಂದರ ಬಳಿ ಬಂದು ಕೇಳುತ್ತಾನೆ "ನೀವು ಕೂಡ ಮಹಿಳೆಯರ ಏಳಿಗೆಯನ್ನು ಬೆಂಬಲಿಸುತ್ತೀರಿ. ನನಗೆ ಕೂಡ ಅದರಲ್ಲಿ ಆಸಕ್ತಿಯಿದೆ. ಮಹಿಳೆಯರ ಸುಧಾರಣೆಗಾಗಿ ನಾನೇನು ಮಾಡಲಿ? ಯಾವ ರೀತಿ ಬೆಂಬಲಿಸಲಿ?"
ವಿವೇಕಾನಂದರು ಉತ್ತರಿಸುತ್ತಾರೆ "ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿ. ಅವರ ಸುಧಾರಣೆಗಾಗಿ ನೀವೇನೂ ಮಾಡಬೇಕಾಗಿಲ್ಲ. ಅವರ ಬೆಳವಣಿಗೆಯ ದಾರಿಗೆ ನೀವು ಅಡ್ಡ ಬರದಿದ್ದರೆ ಸುಧಾರಣೆ ತಾನಾಗಿಯೇ ಆಗುತ್ತದೆ."
ಇಷ್ಟೇ ಆಗಬೇಕಾಗಿರುವುದು. ಮಹಿಳೆಯರ ಸುಧಾರಣೆಗಾಗಿ ಪುರುಷರೇನೂ ಮಾಡಬೇಕಾಗಿಲ್ಲ. ನೀವು ಹಾಕಿರುವ ಬೇಲಿಗಳನ್ನು ನಿವಾರಿಸಿ. ಮಹಿಳೆ ಅಗತ್ಯತೆಗೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾಳೆ.
 
ಇಂತಹಾ ದೂರದೃಷ್ಠಿತ್ವವನ್ನುಳ್ಳಂತಹಾ ಪುಣ್ಯಾತ್ಮ ಶ್ರೀ ಸ್ವಾಮಿ ವಿವೇಕಾನಂದ ಇಂದು ಹಲವಾರು ಮಂಧಿಗೆ ಸ್ವಾಮಿ ವಿವೆಕಾನಂದರೆಂದರೆ ಅವರೊಬ್ಬ ಕೋಮುವಾದಿ ಎಂಬಿತ್ಯಾದಿ ಹಣೆಪಟ್ಟಿ ಕಟ್ಟುವವರಿದ್ದಾರೆ, ಅಷ್ಟೇ ಯಾಕೆ ಕೆಲ ಬುದ್ದಿಜೀವಿಗಳಂvತೂ ಮಂಗಳೂರಿನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಸ್ವಾಮಿ ವಿವೇಕಾನಂದರೇ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು ಎಂದು ಹೇಳುವಷ್ಟರ ಮಟ್ಟಿಗೆ ಸಮಾಜ ಬೆಳೆದಿದೆ ... ಆದರೆ ಏನೇ ಆಗಲಿ ಸತ್ಯ ಯಾವಿತ್ತಿಗೂ ಸತ್ಯವೇ ಒಂದಿಲ್ಲೊಂದು ದಿನ ಸತ್ಯಕ್ಕೆ ನೈಜ ಬೆಲೆ ಸಿಗುವುದು ಖಂಡಿತ ಎನ್ನುವುದು ಎನ್ನಯ ನಂಬಿಕೆ ...
ಕಾಲಾಯ ತಸ್ಮೈ ನಮಃ ...
ಶ್ರೀ ರಾಮಕೃಷ್ಣಾರ್ಪಣಮಸ್ತು