Thursday 12 July 2018

ರಾಮಕೃಷ್ಣ ರಾಮಕೃಷ್ಣ ಭಕ್ತದಯಾ ಬಂಧು ನೀನು

ರಾಮಕೃಷ್ಣ ಕಥಾಮೃತ
ಶ್ರೀ ರಾಮಕೃಷ್ಣ ಪರಮಹಂಸರ ಮಹಿಮೆ ಅಪಾರ ... ಎಲ್ಲಾ ಮಾತುಗಳನ್ನು ಹೇಳುವುದಕ್ಕೂ ಮೊದಲು ಶ್ರೀ ರಾಮಕೃಷ್ಣ ಪರಮಹಂಸರ ಕುರಿತಾಗಿ ಕೆಲವೊಂದು ಮಾತುಗಳನ್ನು ಹೇಳಲೇಬೇಕು...
ಎಲ್ಲರಂತಲ್ಲ ನನ್ನ ಗುರುದೇವ ಅವರಿಗೆ ಹೋಲಿಕೆಯ ಸರಿಸಾಟಿ ಯಾರೂ ಇಲ್ಲ... ದೈವಭಕ್ತಿಯಲ್ಲಿ ಈ ಆಧುನಿಕ ಕಾಲದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರನ್ನು ಮಿರಿಸಿದವರು ಯಾರೂ ಇಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ... ಯಾಕೆ ಗೊತ್ತೇನು ಶ್ರೀ ರಾಮಕೃಷ್ಣ ಪರಮಹಂಸರ ಇಚ್ಛಾಶಕ್ತಿಯೇ ಅಂತದ್ದು ಅಂದುಕೊಂಡ ಕಾರ್ಯಗಳನ್ನು ಮುಗಿಸದೇ ಅವರು ತಿರುಗಿ ನೊಡಿದ್ದೇ ಇಲ್ಲ... ಅದೇಕೋ ಗೊತ್ತಿಲ್ಲ ಇಂದಿಗೂ ಹಲವಾರು ಕೆಲಸಗಳಲ್ಲಿ ನನಗೆ ಶ್ರೀ ರಾಮಕೃಷ್ಣ ಪರಮಹಂಸರೇ ಸ್ಪೂರ್ತಿ... ಅವರು ಯಾವ ಕಾರಂದಿಂದಾಗಿ ನನಗೆ ಸ್ಪೂರ್ತಿಯಾದರು ಗೊತ್ತೇನು ? ಬಣ್ಣಿಸಲು ಹೊರಟರೆ ಪದಗಳೇ ಸಾಲದು... ದೂರದ ಪಶ್ಚಿಮ ಬಂಗಾಳದಲ್ಲಿ ಎಲ್ಲೋ ಒಂದು ಹಳ್ಳಿ ದಕ್ಷಿಣೇಶ್ವರ, ಅಲ್ಲಿನ ಕಾಳಿ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಮಹಾತ್ಮ ಬ್ರಾಹ್ಮಣ ನನಗೆ ಹೇಗೆ ಆದರ್ಶವಾದರೋ ನನಗೇ ತಿಳಿಯದು .. ಆದರೆ ಅವರ ಸಾಧನಾಗಾಥೆಯನ್ನು ಹೇಳ ಹೊರಟರೆ ನನಗೆ ಕಣ್ಣಂಚಿನಲ್ಲಿ ಹನಿಯೊಂದು ಹಾಗೇಯೇ ಬಂದು ನೆಲಸೇರುತ್ತದೆ....

ಅವರ ಜೀವನದ ಕಥೆಯೊಂದನ್ನು ನಾನಿಂದು ನಿಮಗೆ ಹೇಳುತ್ತಿರುವೆ ಕೇಳಿ.... ದಕ್ಷಿಣೇಶ್ವರದ ಕಾಳಿ ದೇವಾಲಯದಲ್ಲಿ ಅರ್ಚಕರಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸರಿಗೆ ಅದೇನು ಹಂಬಲವೋ ಗೊತ್ತಿಲ್ಲ... ಶ್ರೀ ದೇವಿ ಕಾಳಿಯನ್ನು ನೋಡಬೇಕು , ಆಕೆಯೊಡನೆ ಮಾತನಾಡಬೇಕು ಎಂಬ ಹಂಬಲ.... ಅದಕ್ಕಾಗಿ ದಿನವೂ ಹಠಸಾಧನೆ , ಸ್ವಂತ ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಶ್ರಿ ರಾಮಕೃಷ್ಣರು ಪ್ರತಿನಿತ್ಯ ಗಂಗೆಯ ದಡದಲ್ಲಿ ಹೊರಳಾಡುತ್ತಾ ತಾಯಿ ಎನ್ನುತಾ ಕೂಗುತ್ತಾ , ತಾಯಿ ಇನ್ನೋಂದು ದಿನ ಕಳೆದು ಹೋಯಿತು ನಿನ್ನನ್ನು ನೋಡಲಾಗಲಿಲ್ಲವಲ್ಲ ಎಂದು ಪರಿತಪಿಸುತ್ತಿದ್ದರಂತೆ , ನಾವಾದರೋ ಇವತ್ತು ನೋಡದಿದ್ದರೆ ನಾಳೆ ನೋಡಿದರಾಯಿತು, ಎಂದು ಸುಮ್ಮನೆ ಬಿಡುತ್ತಿದ್ದೇವೋ ಏನೋ ಆದರೆ ಶ್ರೀ ರಾಮಕೃಷ್ಣರು ಹಾಗಲ್ಲ... ತಾಯಿ ನಿನ್ನನ್ನು ನೋಡದ ನನ್ನ ಜನುಮ ವ್ಯರ್ಥ ಎಂದು ಗಂಗೆಯ ದಡದಲ್ಲಿರುವ ಕಲ್ಲಿಗೆ ತಮ್ಮ ಮುಖವನ್ನು ಉಜ್ಜುತ್ತಿದ್ದರಂತೆ, ಹಲವರು ಇವರನ್ನು ಹುಚ್ಚರೆಂದುಕ್ಕೊಂಡಿದ್ದೂ ಇದೆ... ಕೊನೆಗೊಂದು ದಿನ ತಾಯಿ ನಿನಗೆ ನನ್ನ ಪ್ರಾರ್ಥನೆ ಕೇಳಿಲ್ಲವೇ ಎಂದು , ದೇವಾಲಯದ ವಿಗ್ರಹದಲ್ಲಿದ್ದ ಆಯುಧವನ್ನು ತೆಗೆದುಕೊಂಡು ತನ್ನನ್ನು ತಾನೇ ದೇವರಿಗೆ ಸಮರ್ಪಿಸಲು ಹೊರಟಾಗ ದೇವಿ ಪ್ರತ್ಯಕ್ಷಳಾದಳು ಎಂದು ಕಥೆಗಳು ಹೇಳುತ್ತವೆ... ಇಂದಿನ ಕಾಲಘಟ್ಟದಲ್ಲಿ ದೇವರ ಹೆಸರಿನಲ್ಲಿ ಕಾಸು ಕೊಳ್ಳೆ ಹೊಡೆಯುತ್ತಾ ಜನರನ್ನು ಮೋಸ ಮಾಡುವ ಸ್ವಾಮೀಜಿಗಳ ಮುಂದೆ ರಾಮಕೃಷ್ಣರು ದೇವತಾ ಪುರುಷರಂತೆ ಕಾಣಿಸುತ್ತಾರೆ... ಆದರೂ ಇಂದಿಗೂ ಬಹಳಷ್ಟು ಜನರಿಗೆ ರಾಮಕೃಷ್ಣ ಪರಮಹಂಸರ ಬಗ್ಗೆ ಗೊತ್ತೇ ಇಲ್ಲ... ಆದರೇನಂತೆ ಕಾಲಾಯ ತಸ್ಮೈ ನಮಃ ಎಂಬಂತೆ ಒಂದಿಲ್ಲೋಂದು ದಿನ ಜನರು ಶ್ರೀ ರಾಮಕೃಷ್ಣರ ಪದತಲಗಳಲ್ಲಿ ಶರಣಾಗುವುದರಲ್ಲಿ ಸಂದೇಹವೇ ಇಲ್ಲ......

ರಾಮಕೃಷ್ಣ ರಾಮಕೃಷ್ಣ ಭಕ್ತದಯಾ ಬಂಧು ನೀನು
ಮನದಿ ನಿನ್ನ ಪುಣ್ಯ ನಾಮ
ನೆನೆದು ನೆನೆದನು ಧನ್ಯ ನಾನು

ಶ್ರೀ ರಾಮಕೃಷ್ಣರನ್ನು ನೆನೆದು ಅವರಿಗಾಗಿ ಒಂದು ಭಕ್ತಿಗೀತೆಯನ್ನು ರಚಿಸುವ ಪ್ರಯತ್ನದಲ್ಲಿದ್ದೇನೆ ಅದಕ್ಕಾಗಿ ಆ ದೇವರು ನನಗೆ ಶಕ್ತಿ ನೀಡಲಿ ಎನ್ನುವುದೇ ನನ್ನ ಪ್ರಾರ್ಥನೆ



No comments:

Post a Comment