Tuesday 16 January 2018

ಸ್ವಾಮೀಜಿಗೆ ನೂರಾ ಐವತ್ತು ವರುಷ

ವಿಶ್ವವಿಜೇತ ಶ್ರೀ ಸ್ವಾಮಿ ವಿವೇಕಾನಂದ ಜನಿಸಿ ಇಂದಿಗೆ ಸರಿಸುಮಾರು ನೂರಾ ಐವತೈದು ವರುಷಗಳೇ ಸಂದಿವೆ ಆದರೂ ಅವರ ಆದರ್ಶಗಳು ಅಭಿವಂದನೀಯ ಹಾಗು ಇಂದಿನ ಮನಸ್ಥಿತಿಗೆ ಆದರ್ಶಪ್ರಾಯ. ಇಂದು ಸ್ವಾಮಿ ವಿವೇಕಾನಂದರ ಕುರಿತು ಒಂದೆರಡು ಮಾತುಗಳನ್ನು ಬರೆಯಬೇಕು ಎಂದು ನನಗನಿಸುತ್ತಿದೆ ಯಾಕೋ ಗೊತ್ತಿಲ ಇಂದಿನ  ಯುವಜನತೆಯ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ ಯಾಕೆ ಅಂತೀರಾ ... ಅಂತಹ ಮಹಾನ್ ದೇಶಭಕ್ತ ಸಾಧಕನನ್ನು ತಮ್ಮ ಆದರ್ಶಪ್ರಾಯವಾಗಿಟ್ಟುಕೊಳ್ಳುವುದನ್ನು ಬಿಟ್ಟು ಇಂದಿನ ಕಾಂಜಿ ಪಿಂಜಿ ಸಿನಿಮಾ ನಟರನ್ನು ಆದರ್ಶಪ್ರಾಯವಾಗಿಟ್ಟುಕೊಂಡು ಅವರೇ ನಮ್ಮ ಹೀರೋ ಎಂದು ಬೀಗುತ್ತಿದ್ದರೆ ನಮ್ಮ ಕರುಳು ಚುರುಕ್ ಎನ್ನುತ್ತದೆ , ಯಾಕೆ ಅಂತೀರಾ ಇಂದು ದೇಶದಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ನಾನು ಹಾಯಾಗಿದ್ದೇನೆ ನನಗೇನು ಎಂದು ಮನೆಯಲಿ  ಎಸಿ ಹಾಕಿಕೊಂಡು ನಾನು ತಣ್ಣಗಿದ್ದೇನೆ ಎಂದು ಆರಾಮಾಗಿ ಹಾಯಾಗಿ ಮಲಗಿರುವ ನಾಯಕರೆಲ್ಲಿ   ? ನನ್ನ ದೇಶ ಬಡತನದಲ್ಲಿಡೇ ಹಾಗಾಗಿ ಸುಖದ ಸುಪ್ಪತ್ತಿಗೆಯಲ್ಲಿ ನಾನು ಹೇಗೆ ಮಲಗಲಿ ಎಂದು  ದೇಶವನ್ನು ನೆನೆದು ನೆಲದಲ್ಲೇ ಮಲಗಿದೆ ಸ್ವಾಮಿ ವಿವೇಕಾನಂದರೆಲ್ಲಿ ? ಬರೆಯುತ್ತಾ ಹೋದಂತೆ ಇನ್ನು ಅನೇಕ ಕತೆಗಳು ನನ್ನ ಕಣ್ಣ ಮುಂದೆ ಬರುವುದು .... ಆ ಮಹಾತ್ಮನ ಹುಟ್ಟು ಹಬ್ಬವನ್ನು ರಾಮಕೃಷ್ಣ ತಪೋವನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು . 


ಸ್ವಾಮಿ ವಿವೇಕಾನಂದರನ್ನು ನಾವು ಆದರ್ಶಪ್ರಾಯವಾಗಿಟ್ಟುಕೊಂಡು ಏಕೆ ಕೆಲಸ ಮಾಡಬೇಕು ಎಂದು ನೀವು ಯೋಚಿಸುತ್ತಿದ್ದೀರಾ ? ಕಾರಣವಿಷ್ಟೇ , ಸ್ವಾಮಿ ವಿವೇಕಾನಂದರು ಅಂದು ದೇಶದ ಐತಿಹಾಸಿಕ ಸಂಸ್ಕೃತಿಗಳ ವಿಚಾರವನ್ನು ತಿಳಿಸಲು ವಿದೇಶಕ್ಕೆ ಹೋಗಿದ್ದಂತಹ  ಸ್ವಾಮಿ ವಿವೇಕಾನಂದರು ತಮ್ಮ ದೇಶವನ್ನು ನೆನೆದು ಕಣ್ಣೀರಿಡುತ್ತಿದ್ದರು . ನನ್ನ ದೇಶದಲ್ಲಿ ಸಾವಿರಾರು ಮಂದಿ ಬಡಜನರು ಹೊಟ್ಟೆಗೆ ಹಿಟ್ಟಿಲ್ಲದೆ ಮರುಗುತ್ತಿದ್ದರೆ ನಾನು ಹೇಗೆ ತಾನೆ ಖುಷಿಯಿಂದ ಬದುಕಲಿ ಎಂದು ಮರುಗುತ್ತಿದ್ದರು . ಅಂತಹ ಅದಮ್ಯ ಚೇತನ  ಶ್ರೀ ಸ್ವಾಮಿ ವಿವೇಕಾನಂದ . ಇಂತಹ ಪುಣ್ಯ ಮಹಾನ್ ಚೇತನವನ್ನು ನಾವಿಂದು ಮರೆಯುತ್ತಿದ್ದೇವೆ ಈ ರೀತಿ ಆಗದಂತೆ ಇನ್ನಾದರೂ ಎಚ್ಚರಿಕೆಯಿಂದ ಸ್ವಾಮಿ ವಿವೇಕಾನಂದರ ವಾಣಿಯನ್ನು ನಾವು ಎಂದಿಗೂ ಮರೆಯಬಾರದು .

" ಕುದಿಯದ ರಕ್ತ ,ರಕ್ತವೇ ಅಲ್ಲ
ಮಿಡಿಯದ ಹೃದಯ ಹೃದಯವೇ ಅಲ್ಲ
ದೇಶಕ್ಕಾಗಿ ಬಾಳದ ಬದುಕು
ಬದುಕೇ ಅಲ್ಲ ನರಕವದು

No comments:

Post a Comment